alex Certify
ಕನ್ನಡ ದುನಿಯಾ       Mobile App
       

Kannada Duniya

‘ಕಾವೇರಿ’ಯನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹಿಂದೆ ವಾಸ್ತವ್ಯ ಹೂಡಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ ಯನ್ನು ಉಳಿಸಿಕೊಳ್ಳಲು ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ‘ಕಾವೇರಿ’ಯನ್ನು ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಸಿದ್ದರಾಮಯ್ಯ ಮೈತ್ರಿಕೂಟ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದು, ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿ ‘ಕಾವೇರಿ’ ನಿವಾಸವನ್ನು ನೀಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಲಾಭದಾಯಕ ಹುದ್ದೆ ನಿಯಮದಡಿ ಸಂಕಷ್ಟ ಎದುರಾಗಬಹುದೆಂಬ ಕಾರಣಕ್ಕೆ ಅದನ್ನು ಕೈ ಬಿಡಲಾಗಿದೆ.

ಹೀಗಾಗಿ ಕಾವೇರಿ ನಿವಾಸದಲ್ಲಿ ತಮ್ಮ ವಾಸ್ತವ್ಯ ಮುಂದುವರೆಸಲು ಬಯಸಿರುವ ಸಿದ್ದರಾಮಯ್ಯನವರು, ಮೈತ್ರಿಕೂಟ ಸರ್ಕಾರದಲ್ಲಿ ಸಚಿವರಾಗಿರುವ ತಮ್ಮ ಆಪ್ತ ಕೆ.ಜೆ. ಜಾರ್ಜ್ ಅವರಿಗೆ ಈ ನಿವಾಸವನ್ನು ಮಂಜೂರು ಮಾಡಿಸಿ ಬಳಿಕ ಅದರಲ್ಲಿ ತಾವು ವಾಸ್ತವ್ಯ ಮುಂದುವರೆಸಲು ಮುಂದಾಗಿದ್ದಾರೆಂದು ಹೇಳಲಾಗಿದೆ. ಮಹತ್ವದ ಸಂಗತಿಯೆಂದರೆ ‘ಕಾವೇರಿ’ ನಿವಾಸದ ಮೇಲೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರೂ ಕಣ್ಣಿಟ್ಟಿದ್ದರಾದರೂ ಆದರೆ ಅದು ಈಗ ಕೆ.ಜೆ. ಜಾರ್ಜ್ ಅವರಿಗೆ ಮಂಜೂರಾಗಿರುವ ಕಾರಣ ಸಿದ್ದರಾಮಯ್ಯ ಅಲ್ಲಿಯೇ ತಮ್ಮ ವಾಸ್ತವ್ಯವನ್ನು ಮುಂದುವರೆಸಲಿದ್ದರಾ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...