alex Certify
ಕನ್ನಡ ದುನಿಯಾ       Mobile App
       

Kannada Duniya

ಔತಣಕೂಟದ ಮೂಲಕ ಎದುರಾಳಿಗಳಿಗೆ ಶಕ್ತಿ ಪ್ರದರ್ಶಿಸಿದ್ರಾ ಸಿದ್ದು?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಂಗಳವಾರದಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದು, ಇದಕ್ಕೆ ಸಚಿವ ಸ್ಥಾನ ವಂಚಿತ ಕೆಲ ಅತೃಪ್ತ ಶಾಸಕರನ್ನು ಹೊರತುಪಡಿಸಿ ಬಹುತೇಕ ಮಂದಿ ಹಾಜರಾಗಿದ್ದಾರೆ. ಔತಣಕೂಟದ ಮೂಲಕ ಸಿದ್ದರಾಮಯ್ಯ ಎದುರಾಳಿಗಳಿಗೆ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಆತ್ಮೀಯ ವಲಯದಲ್ಲಿರುವ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಬಹುತೇಕ ಸಚಿವರು ಔತಣಕೂಟದಲ್ಲಿ ಭಾಗಿಯಾಗಿದ್ದು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೀಗೆ ಬಂದು ಹಾಗೆ ಹೋಗಿದ್ದಾರೆ. ಇನ್ನು ಸಚಿವ ಡಿ.ಕೆ. ಶಿವಕುಮಾರ್ ಅರ್ಧ ಗಂಟೆಗಳ ಕಾಲ ಔತಣಕೂಟದಲ್ಲಿದ್ದರು.

ಸಚಿವ ಸ್ಥಾನ ಸಿಗದೆ ಸಿದ್ದರಾಮಯ್ಯನವರ ವಿರುದ್ಧ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿಯವರ ಗೈರುಹಾಜರಿ ಎದ್ದು ಕಾಣುತ್ತಿತ್ತು. ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿಯವರೂ ಔತಣ ಕೂಟದಿಂದ ದೂರವುಳಿದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...