alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ಬೆಟ್ಟ ಹತ್ತಿದ ರಹಸ್ಯ ಬಿಚ್ಚಿಟ್ಟ ಸಿ.ಎಂ.

ಹಾಸನ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದೆ. ಕಳಶಾಭಿಷೇಕದೊಂದಿಗೆ ಮಹಾಮಜ್ಜನಕ್ಕೆ ಚಾಲನೆ ನೀಡಲಾಗಿದೆ.

ವರ್ಧಮಾನ ಸಾಗರ ಮಹಾರಾಜರು, ಆಚಾರ್ಯರು, ಜೈನಮುನಿಗಳು ಮಹಾಮಜ್ಜನಕ್ಕೆ ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಮಹಾಮಜ್ಜನದಲ್ಲಿ ಭಾಗವಹಿಸಿದ್ದರು.

ವಿಶೇಷ ಹೆಲಿಕಾಪ್ಟರ್ ನಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸಿದ ಸಿ.ಎಂ. ಡೋಲಿಯಲ್ಲಿ ಬೆಟ್ಟವನ್ನು ಏರಲು ನಿರಾಕರಿಸಿ ನಡೆದುಕೊಂಡೇ ಬೆಟ್ಟವನ್ನು ಹತ್ತಿದ್ದಾರೆ. 708 ಮೆಟ್ಟಿಲುಗಳನ್ನು ಹತ್ತಿದ್ದ ಅವರು, ಬಾಹುಬಲಿಗೆ ಕಳಶಾಭಿಷೇಕ ನೆರವೇರಿಸಿದ್ದಾರೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ವೀರೇಂದ್ರ ಹೆಗ್ಗಡೆ ಮೊದಲಾದವರು ಈ ಸಂದರ್ಭದಲ್ಲಿದ್ದರು. ನಂತರ ಸಿ.ಎಂ. ನಡೆದುಕೊಂಡೇ ಬೆಟ್ಟವನ್ನು ಇಳಿದಿದ್ದಾರೆ.

2000 ರಲ್ಲಿ ಸ್ಟಂಟ್ ಅಳವಡಿಸಿಕೊಂಡಿದ್ದು, ಬೆಟ್ಟ ಹತ್ತಲು ರಿಸ್ಕ್ ತೆಗೆದುಕೊಳ್ಳುವುದ ಬೇಡ ಎಂದುಕೊಂಡಿದ್ದೆ. ಇಲ್ಲಿಗೆ ಬಂದ ನಂತರ ಸ್ವಲ್ಪ ದೂರ ಬೆಟ್ಟವನ್ನು ಹತ್ತಿದೆ. ಬಳಿಕ ಹುಮ್ಮಸ್ಸಿನಿಂದ ಬೆಟ್ಟವನ್ನು ಹತ್ತಿದೆ. ಡೋಲಿವಾಲಗಳನ್ನು ನೋಡಿದೆ. ಶಾಂತಿದೂತನ ಸ್ಥಳದಲ್ಲಿ ಹಿಂಸೆ ಕೊಡಬಾರದೆಂದು ಬೆಟ್ಟವನ್ನು ಹತ್ತಿದೆ ಎಂದು ಅವರು ಹೇಳಿದ್ದಾರೆ.

ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವನಾಗಿದ್ದೆ. ಅಂದು ಮಹಾಮಸ್ತಕಾಭಿಷೇಕಕ್ಕೆ ಅನುದಾನ ಬಿಡುಗಡೆ ಮಾಡಿದ್ದೆ. ದೇವೇಗೌಡರ ಮಾತು ಕೇಳಿ ಧರಂಸಿಂಗ್ ನನ್ನನ್ನು ವಜಾಗೊಳಿಸಿದ್ದರಿಂದ ಡಿ.ಸಿ.ಎಂ., ಸಚಿವ ಸ್ಥಾನ ಕಳೆದುಕೊಂಡಿದ್ದರಿಂದ ಮಹಾಮಸ್ತಕಾಭಿಷೇಕಕ್ಕೆ ಬರಲಾಗಿರಲಿಲ್ಲ. ಇದೇ ಮೊದಲ ಬಾರಿಗೆ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...