alex Certify
ಕನ್ನಡ ದುನಿಯಾ       Mobile App
       

Kannada Duniya

‘ಸಿದ್ರಾಮಯ್ಯರನ್ನ ಕಳಿಸಬೇಕಾದ ಜಾಗಕ್ಕೆ ಕಳಿಸದಿದ್ರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ’

ಹಾವೇರಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕಳಿಸಬೇಕಾದ ಜಾಗಕ್ಕೆ ಕಳಿಸದಿದ್ದರೆ, ನನ್ನ ಹೆಸರು ಯಡಿಯೂರಪ್ಪನೇ ಅಲ್ಲ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಹಾವೇರಿಯಲ್ಲಿ ನಡೆದ ಬಿ.ಜೆ.ಪಿ. ಸಮಾವೇಶದಲ್ಲಿ ಮಾತನಾಡಿದ ಅವರು, ಪದೇ ಪದೇ ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ ಎನ್ನುತ್ತೀರಿ. ನಿಮ್ಮ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೂಡ ಬೇಲ್ ಮೇಲೆ ಹೊರಗಿದ್ದಾರೆ. ಯಡಿಯೂರಪ್ಪನ ಬಗ್ಗೆ ಮಾತ್ರ ಹಗುರವಾಗಿ ಮಾತನಾಡುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಯ್ ಸಿದ್ರಾಮಯ್ಯ ಎಂದು ಏಕವಚನದಲ್ಲಿಯೇ ಸಿ.ಎಂ.ರನ್ನು ಟೀಕಿಸಿದ ಬಿ.ಎಸ್.ವೈ., ಇನ್ನೊಂದು ತಿಂಗಳು ಅಷ್ಟೇ. ನಿಮ್ಮನ್ನು ಯಾವ ಜಾಗಕ್ಕೆ ಕಳಿಸಬೇಕೋ ಅಲ್ಲಿಗೆ ಕಳಿಸುತ್ತೇನೆ. ಹಗರಣಗಳನ್ನು ಬಯಲು ಮಾಡುತ್ತೇನೆ. ನೀವು ಸತ್ಯ ಹರಿಶ್ಚಂದ್ರನ ಮಗ ಅಲ್ಲವೇ? ದುಬಾರಿ ವಾಚ್ ಕೊಟ್ಟಿದ್ಯಾರು? ಅದನ್ನು ಮರಳಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಎಸ್.ವೈ., ರಾಹುಲ್ ಗಾಂಧಿಯವರನ್ನು ಕರೆದುಕೊಂಡು ಬಂದು ದೇವಸ್ಥಾನಕ್ಕೆ ಹೋದ್ರೆ, ಮಂಡಕ್ಕಿ ಮಿರ್ಚಿ ತಿಂದು ಸರಳ ವ್ಯಕ್ತಿ ಎಂದು ಬಿಂಬಿಸಲು ಹೊರಟಿದ್ದೀರಾ? ನಿಮ್ಮ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ. 19 ರಾಜ್ಯಗಳು ಕಾಂಗ್ರೆಸ್ ಮುಕ್ತವಾಗಿದ್ದು, ರಾಜ್ಯವೂ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...