alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿಲ್ಲ ರೆಬೆಲ್ ಸ್ಟಾರ್

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ನಟ ಅಂಬರೀಷ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಂಬರೀಷ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಪಕ್ಷದ ನಾಯಕರನ್ನು ಚಿಂತೆಗೀಡು ಮಾಡಿದೆ ಎನ್ನಲಾಗಿದೆ.

ಟಿಕೆಟ್ ಘೋಷಣೆಗೂ ಮುನ್ನವೇ ಅಂಬರೀಷ್ ಅವರಿಗೆ ಕರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿಯೂ ನಿಮಗೇ ಟಿಕೆಟ್ ಎಂದು ಹೇಳಿದ್ದರಲ್ಲದೇ ಅದರಂತೆ ಅಂಬರೀಷ್ ಅರ್ಜಿ ಹಾಕಿರದಿದ್ದರೂ ಅವರ ಹೆಸರನ್ನು ಘೋಷಿಸಲಾಗಿತ್ತು.

ಆದರೆ ಅಂಬರೀಷ್ ಇದುವರೆಗೂ ಬಿ ಫಾರಂ ಪಡೆಯಲು ಮುಂದಾಗದಿರುವುದು ಹಾಗೂ ಅವರನ್ನು ಸಂಪರ್ಕಿಸಲು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಯತ್ನಿಸಿದರೂ ಪ್ರತಿಕ್ರಿಯಿಸದಿರುವುದು ಅಂಬರೀಷ್ ಅವರ ಮುಂದಿನ ನಡೆ ಏನು ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಅಂಬರೀಷ್ ಅವರಿಗೆ ಇಂದು ಸಂಜೆಯೊಳಗಾಗಿ ಸ್ಪರ್ಧಿಸುವ ಕುರಿತು ಒಂದು ನಿರ್ಧಾರಕ್ಕೆ ಬನ್ನಿ. ಇಲ್ಲದಿದ್ದರೆ ನೀವೇ ಒಬ್ಬ ಅಭ್ಯರ್ಥಿಯನ್ನು ಸೂಚಿಸಿ ಎಂಬ ಸಂದೇಶ ರವಾನಿಸಿದ್ದಾರೆನ್ನಲಾಗಿದ್ದು, ಇದ್ಯಾವುದಕ್ಕೂ ಅಂಬರೀಷ್ ಸ್ಪಂದಿಸದಿದ್ದರೆ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...