alex Certify
ಕನ್ನಡ ದುನಿಯಾ       Mobile App
       

Kannada Duniya

109 ನೇ ವಸಂತಕ್ಕೆ ಕಾಲಿಟ್ಟ ನಡೆದಾಡುವ ದೇವರು

siddaganga

ಭಕ್ತರ ಪಾಲಿನ ನಡೆದಾಡುವ ದೇವರು, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಇಂದು 109 ನೇ ಜನ್ಮದಿನ. ಊಟ, ವಸತಿ, ಶಿಕ್ಷಣ ಹೀಗೆ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಂದಿಯ ಬಾಳಿಗೆ ಬೆಳಕಾದವರು ಸಿದ್ಧಗಂಗಾ ಶ್ರೀಗಳು.

ಶ್ರೀಗಳ 109ನೇ ಜನ್ಮದಿನಾಚರಣೆಯನ್ನು ಸ್ಮರಣೀಯವಾಗಿಸಲು ದಿನವಿಡೀ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 1930ರಿಂದ ಇದುವರೆಗೆ ಶ್ರೀಗಳು ಮಠದ ಮೂಲಕ ಬೆಳಕು ನೀಡಿದ್ದಾರೆ. ಅಂದಿನ ಕಷ್ಟದ ಕಾಲದಲ್ಲಿಯೂ ಶಿಕ್ಷಣ, ದಾಸೋಹ ನಡೆಸಿಕೊಂಡು ಬಂದ ಅವರು, ಸೇವೆಯನ್ನು ಮುಖ್ಯವಾಗಿಸಿಕೊಂಡವರು. ನಡೆದಾಡುವ ದೇವರೆಂದೇ ಖ್ಯಾತರಾಗಿರುವ ಶ್ರೀಗಳು, ಬೇರೆ ಮಠಗಳಿಗೂ ಮಾದರಿಯಾಗುವಂತಹ ಕಾರ್ಯವನ್ನು ಕೈಗೊಂಡವರು. ಸಾಮಾಜಿಕ ಸೇವೆಗೆ ಹೊಸ ಆಯಾಮವನ್ನು ತಂದು ಕೊಟ್ಟವರು.

ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ನಾಡಿನ ಹಲವು ಮಠಾಧೀಶರು ಶುಭ ಕೋರಿದ್ದಾರೆ. ರಾಜಕೀಯ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತರು, ಶ್ರೀಗಳ 109ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶ್ರೀಗಳು ಎಂದಿನಂತೆ ಶಿವ ಪೂಜೆ ಮಾಡಿ, ಭಕ್ತರಿಗೆ ದರ್ಶನ ನೀಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...