alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮರಾದ ಧೀರ ಯೋಧ ಹನುಮಂತಪ್ಪ ಕೊಪ್ಪದ್

458827-hanumanthappa

ಸಿಯಾಚಿನ್ ಹಿಮಪಾತದಲ್ಲಿ ಸತತ 6 ದಿನಗಳ ಕಾಲ ಸಿಲುಕಿ ಸಾವನ್ನೇ ಜಯಿಸಿ ಬಂದಿದ್ದ, ಕರ್ನಾಟಕದ ಧೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಇಂದು ಬೆಳಿಗ್ಗೆ ಹುತಾತ್ಮರಾಗಿದ್ದಾರೆ.

ಸತತ ಕಾರ್ಯಾಚರಣೆ ನಡೆಸಿ ಅವರನ್ನು ಹಿಮಪಾತದಿಂದ ರಕ್ಷಿಸಿ ತಂದಿದ್ದ ರಕ್ಷಣಾ ತಂಡ, ತೀವ್ರ ಗಂಭೀರ ಸ್ಥಿತಿಯಲ್ಲಿದ್ದ ಹನುಮಂತಪ್ಪ ಕೊಪ್ಪದ್ ಅವರನ್ನು ನವದೆಹಲಿಯ ಆರ್.ಆರ್. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿತ್ತು.

ದಿನೇ ದಿನೇ ಅವರ ಆರೋಗ್ಯ ಹದಗೆಡುತ್ತಾ ಬಂದಿದ್ದು, ವೈದ್ಯರುಗಳು ಅವರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಅಲ್ಲದೇ ದೇಶಾದ್ಯಂತ ಜನತೆ ಹನುಮಂತಪ್ಪ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ನಡೆಸಿದ್ದರು.

ಬಹು ಅಂಗಾಂಗಳ ವೈಫಲ್ಯದಿಂದ ಬಳಲುತ್ತಿದ್ದ ಹನುಮಂತಪ್ಪ ಅವರಿಗೆ ಅಂಗಾಂಗ ದಾನ ಮಾಡಲು ಹಲವರು ಮುಂದೆ ಬಂದಿದ್ದರು. ಎಲ್ಲ ಪ್ರಯತ್ನಗಳ ನಡುವೆಯೂ ಹನುಮಂತಪ್ಪ ಕೊಪ್ಪದ್ ಇಂದು ಬೆಳಿಗ್ಗೆ 11-45 ರ ಸುಮಾರಿಗೆ ಹುತಾತ್ಮರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...