alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರವಣಬೆಳಗೊಳ ‘ಮಹಾಮಸ್ತಕಾಭಿಷೇಕ’ ಕಣ್ತುಂಬಿಕೊಳ್ಳಿ

ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದೆ. ನಿನ್ನೆಯಿಂದ 88 ನೇ ಮಹಾಮಸ್ತಕಾಭಿಷೇಕ ಆರಂಭವಾಗಿದೆ. ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹವಾಗಿರುವ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಬರುತ್ತಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಶ್ರವಣಬೆಳಗೊಳ ಬೆಂಗಳೂರಿನಿಂದ ಸುಮಾರು 148 ಕಿಲೋ ಮೀಟರ್ ದೂರದಲ್ಲಿದೆ. ವಿಂಧ್ಯಗಿರಿ ಪರ್ವತದ ಮೇಲೆ ಬಾಹುಬಲಿ ವಿಗ್ರಹವನ್ನು ಕ್ರಿ.ಶ. 973 ರಲ್ಲಿ ಕೆತ್ತಿಸಿದ್ದನೆಂದು ಹೇಳಲಾಗುತ್ತದೆ.

ಬೆಟ್ಟಕ್ಕೆ ಹೋಗಲು ಮೆಟ್ಟಿಲುಗಳನ್ನು ಹತ್ತಬೇಕಿದೆ. ಜೈನರ ಪುಣ್ಯಕ್ಷೇತ್ರವಾಗಿರುವ ಶ್ರವಣಬೆಳಗೊಳದ ಬೆಟ್ಟದ ಮೇಲಿನಿಂದ ಅಗಾಧ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಿಧ್ಯಗಿರಿ ಬೆಟ್ಟದ ಎದುರಲ್ಲಿ ಚಂದ್ರಗಿರಿ ಬೆಟ್ಟವಿದ್ದು, ಅಲ್ಲಿ ಜೈನ ಬಸದಿಗಳಿವೆ.

ಜೈನರ ಧಾರ್ಮಿಕ ಕೇಂದ್ರವಾಗಿರುವ ಶ್ರವಣಬೆಳಗೊಳದಲ್ಲಿ ಪ್ರಸ್ತುತ ವಿಶ್ವ ಖ್ಯಾತಿಯ ಮಹಾಮಸ್ತಕಾಭಿಷೇಕ ನಡೆಯುತ್ತಿದೆ. ಪಂಚ ಕಲ್ಯಾಣ ಪ್ರತೀಕ್ಷಾ ಮಹೋತ್ಸವ, ಇತರೆ ಧಾರ್ಮಿಕ ಕಾರ್ಯಗಳು ನಡೆದ ಬಳಿಕ ಪ್ರತಿಮೆಯ ಅಭಿಷೇಕ ಆರಂಭವಾಗಲಿದೆ. ಫೆಬ್ರವರಿ 25 ರ ವರೆಗೆ ವಿವಿಧ ಕಾರ್ಯಗಳು ಜರಗಲಿವೆ.

ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಶ್ರವಣಬೆಳಗೊಳಕ್ಕೆ ಭೇಟಿ ನೀಡಿ, ಅಪರೂಪದ ದೃಶ್ಯಗಳನ್ನು ಕಣ್ತುಂಬಿಕೊಳ್ಳಿ. ಶ್ರವಣಬೆಳಗೊಳ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿವೆ. ಮೊದಲೇ ಪ್ಲಾನ್ ಮಾಡಿಕೊಂಡು ಬಂದಲ್ಲಿ ಎಲ್ಲಾ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...