alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರವಣಬೆಳಗೊಳದಲ್ಲಿ ದೋಣಿ ವಿಹಾರ, ಜಲಕ್ರೀಡೆ ಆರಂಭ

ಶ್ರವಣಬೆಳಗೊಳದ ಬಾಹುಬಲಿ 88 ನೇ ಮಹಾಮಸ್ತಕಾಭಿಷೇಕದ ಕೊಡುಗೆಯಾಗಿ ಜನಿವಾರ ಕೆರೆಯಲ್ಲಿ ದೋಣಿ ವಿಹಾರ, ಜಲಕ್ರೀಡೆ ಆರಂಭಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಶ್ರವಣಬೆಳಗೊಳದ ಜನಿವಾರ ಕೆರೆಯಲ್ಲಿ ಪ್ರವಾಸಿಗರಿಗಾಗಿ ದೋಣಿ ವಿಹಾರ, ಜಲ ಕ್ರೀಡೆ ಆರಂಭಿಸಲಾಗಿದ್ದು, ಮಹಾಮಸ್ತಕಾಭಿಷೇಕದ ನಂತರದಲ್ಲಿಯೂ ಇದನ್ನು ಉಳಿಸಿಕೊಳ್ಳಲಾಗುವುದು.

ಜನಿವಾರ ಕೆರೆಯಲ್ಲಿ 8 ಬಗೆಯ ದೋಣಿಗಳ ವಿಹಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಇನ್ನೂ ಹೆಚ್ಚಿನ ಬಗೆಯ ದೋಣಿಗಳನ್ನು ತರಿಸಲಾಗುವುದು. ಇದರೊಂದಿಗೆ ಜನಿವಾರ ಕೆರೆಗೆ ವರ್ಷಪೂರ್ತಿ ನೀರು ಹರಿದು ಬರುವ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶ, ವಿದೇಶಗಳಿಂದ ಭಕ್ತರ ದಂಡೇ ಹರಿದು ಬರುತ್ತಿದೆ. ಹೀಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ. ದೋಣಿ ವಿಹಾರ ಮತ್ತು ಜಲಕ್ರೀಡೆಗಳಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ಇದರೊಂದಿಗೆ ಮೋಟರ್ ಬೈಕ್ ನಲ್ಲಿ ಪ್ರವಾಸಿ ಸ್ಥಳ ವೀಕ್ಷಣೆಗೆ ಅನುಕೂಲವಾಗುವಂತೆ ಬೈಕ್ ಸವಾರಿಗೆ ಅವಕಾಶ ನೀಡಲಾಗಿದೆ. ಮಹಾಮಸ್ತಕಾಭಿಷೇಕಕ್ಕೆ ಬರುವವರು ದೋಣಿಯಲ್ಲಿ ವಿಹರಿಸಬಹುದು. ಬೈಕ್ ನಲ್ಲಿ ಸುತ್ತಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...