alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನ ಸೆಳೆಯುತ್ತಿದೆ ದಂಪತಿಯ ‘ಬಾಹುಬಲಿ’ ಸಾಂಗ್ಸ್

ಹಾಸನ: ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಗಾಯಕ ದಂಪತಿ ವಿಶೇಷ ನಮನ ಸಲ್ಲಿಸಿದ್ದಾರೆ.

12 ಭಾಷೆಗಳಲ್ಲಿ ಹಾಡುಗಳನ್ನು ಹಾಡುವ ಮೂಲಕ ಅದನ್ನು ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಸರ್ವೇಶ್ ಜೈನ್ ಮತ್ತು ಸೌಮ್ಯ ಜೈನ್ ದಂಪತಿ ಗಾಯಕರಾಗಿದ್ದು, ಬಾಹುಬಲಿ ಕುರಿತು ವಿವಿಧ ಭಾಷೆಗಳಲ್ಲಿ ಸಾಹಿತಿಗಳಿಂದ ರಚಿಸಲಾದ 12 ಗೀತೆಗಳಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಅದನ್ನು ಜೈನ್ ಬೀಟ್ಸ್ ಹೆಸರಲ್ಲಿ ಹೊರ ತಂದಿದ್ದಾರೆ.

‘ಬಾಹುಬಲಿ ಸ್ವಾಮಿ..’ ಕನ್ನಡದ ಹಾಡು ಸೇರಿದಂತೆ ಪ್ರಾಕೃತ, ಮರಾಠಿ, ಸಂಸ್ಕೃತ, ಇಂಗ್ಲೀಷ್, ತಮಿಳು, ಹಿಂದಿ, ಬಂಗಾಳಿ, ತುಳು ಹೀಗೆ 12 ಭಾಷೆಗಳ ಗೀತೆಗಳಿಗೆ ದಂಪತಿ ಸಂಗೀತ ನೀಡಿ ಹಾಡಿದ್ದು, ಈ ಹಾಡುಗಳ ಕೇಳುಗರ ಮನಸೆಳೆದಿವೆ.

www.Jainbeats.myshopify.com ವೆಬ್ ಸೈಟ್ ನಲ್ಲಿ ಹಾಡುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಲಹೆ, ಮಾರ್ಗದರ್ಶನ ನೀಡಿದ್ದು, ಇಂಗ್ಲಿಷ್ ಗೀತೆಗೆ ಪಲ್ಲವಿ ರಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...