alex Certify
ಕನ್ನಡ ದುನಿಯಾ       Mobile App
       

Kannada Duniya

ಬಲು ದುಬಾರಿಯಾಗಿದೆ ‘ಬಾಹುಬಲಿ’ ಭಕ್ತರ ಮನೆ ಬಾಡಿಗೆ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಲಕ್ಷಾಂತರ ಮಂದಿ ಬರುತ್ತಾರೆ. ದೇಶ, ವಿದೇಶಗಳಿಂದ ಬರುವವರು ಕೆಲವು ದಿನಗಳ ಕಾಲ ಇಲ್ಲಿ ತಂಗುತ್ತಾರೆ.

ಇನ್ನು ಶ್ರವಣಬೆಳಗೊಳ ಜೈನರ ಕಾಶಿ ಎಂದೇ ಪ್ರಸಿದ್ಧವಾಗಿದ್ದು, ಮಹಾಮಸ್ತಕಾಭಿಷೇಕ ನಡೆಯುವ ದಿನಗಳನ್ನು ಕಣ್ತುಂಬಿಕೊಳ್ಳಲು ಉತ್ತರ ಭಾರತದಿಂದಲೂ ಅಪಾರ ಸಂಖ್ಯೆಯ ಮಂದಿ ಆಗಮಿಸಿದ್ದಾರೆ. ಜೈನ ಭಕ್ತರು ತಂಗಲು ವ್ಯವಸ್ಥೆ ಮಾಡಲಾಗಿದೆ.

ಭಕ್ತರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಉಪನಗರಗಳನ್ನು ನಿರ್ಮಿಸಲಾಗಿದೆ. ಉತ್ತರ ಭಾರತದಿಂದ ಹೆಚ್ಚಿನ ಆಗಮಿಸುತ್ತಿದ್ದು, ಅವರಿಗೆ ಬೇಕಾದಂತಹ ತಿಂಡಿ, ತಿನಿಸುಗಳ ಸ್ಟಾಲ್ ಗಳು ಕೂಡ ಆರಂಭವಾಗಿವೆ.

ಇನ್ನು ಶ್ರವಣಬೆಳಗೊಳದಲ್ಲಿ ಖಾಲಿ ಮನೆಗಳು, ವಾಣಿಜ್ಯ ಮಳಿಗೆಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. 4 -5 ಮಂದಿ ಉಳಿದುಕೊಳ್ಳುವ ಸಣ್ಣ ಮನೆಗಳಿಗೆ ದಿನ 4000 ರೂ. ಬಾಡಿಗೆ ಇದೆ. ಇನ್ನು ಕೆಲವರು ತಿಂಗಳ ಬಾಡಿಗೆ ನೀಡಿ ಮನೆಯನ್ನು ಪಡೆದುಕೊಳ್ಳುತ್ತಿದ್ದು ಸುಮಾರು 10 ಮಂದಿ ಉಳಿದುಕೊಳ್ಳುವ ಮನೆಗಳಿಗೆ 30,000 ರೂ.ವರೆಗೆ ಬಾಡಿಗೆ ಇದೆ.

ಬಾಹುಬಲಿ ಮಹಾಮಸ್ತಕಾಭಿಷೇಕ ನಡೆಯುವ ವಿಂಧ್ಯಗಿರಿ ಬೆಟ್ಟದ ಸಮೀಪದಲ್ಲೇ ಇರುವ ನಾಗಯ್ಯನ ಕೊಪ್ಪಲು ಮೊದಲಾದ ಪ್ರದೇಶಗಳಲ್ಲಿನ ಮನೆಗಳಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದೆ. ಶ್ರವಣಬೆಳಗೊಳದಲ್ಲಿ ಬಾಡಿಗೆ ಮನೆಗಳಿಗೆ ಬೇಡಿಕೆ ಜಾಸ್ತಿಯಾಗಿರುವುದರಿಂದ ಕೆಲವರು ತಮ್ಮ ಮನೆಗಳನ್ನು ಬಾಡಿಗೆ ನೀಡಿ ಮಹಾಮಸ್ತಕಾಭಿಷೇಕ ಮುಗಿಯುವವರೆಗೆ ಸಂಬಂಧಿಕರ ಊರಿಗೆ ತೆರಳಿದ್ದಾರೆ. ಮತ್ತೆ ಕೆಲವರು ಕಡಿಮೆ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...