alex Certify
ಕನ್ನಡ ದುನಿಯಾ       Mobile App
       

Kannada Duniya

ಭಕ್ತರ ಮನಸೂರೆಗೊಂಡ ‘ಬಾಹುಬಲಿ’ಯ ವೈಭವ

ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ಮಹಾಮಜ್ಜನದ ವೇಳೆಯಲ್ಲಿ ವಿವಿಧ ವರ್ಣಗಳಲ್ಲಿ ಕಂಗೊಳಿಸುವ ವಿರಾಗಿಯನ್ನು ಕಂಡ ಭಕ್ತರು ಭಾವಪರವಶರಾಗಿದ್ದಾರೆ. ಜಲ, ಅರಿಶಿಣ, ಚಂದನ, ಗಿಡಮೂಲಿಕೆ ಕಷಾಯ ಸೇರಿದಂತೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ 108 ಅಡಿ ಉದ್ದದ ಹೂಮಾಲೆ ಹಾಕಿ ಅಲಂಕರಿಸಲಾಗಿದೆ. ಬಳಿಕ ಮಹಾಮಂಗಳಾರತಿ ಮಾಡಲಾಗಿದ್ದು, ಈ ಅಪರೂಪದ ದೃಶ್ಯಗಳನ್ನು ಕಂಡ ಭಕ್ತರು ಪುನೀತರಾಗಿದ್ದರು.

58 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಹಾರ ಹಾಕುವುದು ಸಾಮಾನ್ಯ ಕೆಲಸವಲ್ಲ. ಇದಕ್ಕಾಗಿ ನೈಲಾನ್ ದಾರದಿಂದ ತಯಾರಿಸಿದ ವಿಶೇಷವಾದ ಹಾರವನ್ನು ಮೂರ್ತಿಯ ಎರಡೂ ಬದಿಗಳಿಂದ ನಿಧಾನವಾಗಿ ಮೇಲಕ್ಕೆ ಎತ್ತಿ ಮೂರ್ತಿಗೆ ಹಾಕಲಾಗುತ್ತದೆ. ಹಿಂದಿನ ಪ್ರಯತ್ನಗಳಲ್ಲಿ ವಿಫಲವಾಗಿದ್ದು, ಬೇಸರ ತರಿಸಿತ್ತು. ಸೋಮವಾರ ಸರಾಗವಾಗಿ ಹೂಮಾಲೆ ಹಾಕಿದಾಗ ಭಕ್ತರ ಸಂಭ್ರಮ ಮುಗಿಲು ಮುಟ್ಟಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...