alex Certify
ಕನ್ನಡ ದುನಿಯಾ       Mobile App
       

Kannada Duniya

‘ಬಾಹುಬಲಿ’ ನೋಡಲು ಬರುವ ಪ್ರವಾಸಿಗರಿಗೆ ಇಲ್ಲಿದೆ ಮಾಹಿತಿ

ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ‘ಬಾಹುಬಲಿ’ ಮಹಾಮಸ್ತಾಕಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ದೇಶ, ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಬಾಹುಬಲಿಯ ಮಹಾಮಜ್ಜನ, ಅಭಿಷೇಕದ ವೇಳೆ ವಿವಿಧ ವರ್ಣಗಳಲ್ಲಿ ಕಂಗೊಳಿಸುವ ಬಾಹುಬಲಿ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದೇ ಮನಸ್ಸಿಗೆ ಮುದ ನೀಡುತ್ತದೆ. ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶ್ರವಣಬೆಳಗೊಳದಲ್ಲಿನ ಬಾಹುಬಲಿ ಮೂರ್ತಿ ವಿಶ್ವದಲ್ಲಿಯೇ ಅತ್ಯಂತ ಎತ್ತರವಾದ ಮೂರ್ತಿಯಾಗಿದೆ. ಚಂದ್ರಗಿರಿ, ವಿಂಧ್ಯಗಿರಿ ಬೆಟ್ಟಗಳ ನಡುವೆ ಸುಂದರವಾದ ಕೊಳವಿದೆ. ವಿಂಧ್ಯಗಿರಿಯಲ್ಲಿ ಪ್ರಶಾಂತವಾಗಿ ನಿಂತಿರುವ ವಿರಾಗಿಯ ಶಿಲಾಮೂರ್ತಿ ನಿಮ್ಮನ್ನು ಬೆರಗಾಗಿಸುತ್ತದೆ.

ಚಂದ್ರಗಿರಿಯಲ್ಲಿ ಭದ್ರಬಾಹು ಗುಹೆ, ಚಂದ್ರಗುಪ್ತ ಬಸದಿ, ಶಾಂತಿನಾಥ ಬಸದಿ, ಚಾವುಂಡರಾಯ ಬಸದಿ, ಪಾರ್ಶ್ವನಾಥ ಬಸದಿ ಸೇರಿದಂತೆ 13 ಬಸದಿಗಳಿವೆ. ಮಹಾಮಸ್ತಕಾಭಿಷೇಕ ನಡೆಯುತ್ತಿರುವುದರಿಂದ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಬಾಹುಬಲಿಯ ಮಹಾಮಜ್ಜನ ಕಣ್ತುಂಬಿಕೊಳ್ಳಬಹುದಾಗಿದೆ.

ಶ್ರವಣಬೆಳಗೊಳ ಬೆಂಗಳೂರಿನಿಂದ ಸುಮಾರು 150 ಕಿಲೋ ಮೀಟರ್ ದೂರದಲ್ಲಿದ್ದು, ಪ್ರವಾಸಿಗರು, ಭಕ್ತರು ತಂಗಲು ವ್ಯವಸ್ಥೆ ಮಾಡಲಾಗಿದೆ. ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದಲ್ಲಿ ಅನುಕೂಲವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...