alex Certify
ಕನ್ನಡ ದುನಿಯಾ       Mobile App
       

Kannada Duniya

ಪುಕ್ಕಟೆ ಸಿಗರೇಟ್ ನೀಡದ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಕಂಠಪೂರ್ತಿ ಮದ್ಯ ಸೇವಿಸಿದವನೊಬ್ಬ ಪುಕ್ಕಟೆ ಸಿಗರೇಟ್ ನೀಡುವಂತೆ ಅಂಗಡಿ ಮಾಲೀಕನ ಬಳಿ ಕೇಳಿದ್ದು, ನೀಡದ ಕಾರಣ ತನ್ನ ಸಹಚರರೊಂದಿಗೆ ಬಂದು ಚಾಕುವಿನಿಂದ ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕೃಷ್ಣಕಾಂತ್ ಮೌರ್ಯ ಎಂಬುವರ ಅಂಗಡಿಗೆ ಬಂದಿದ್ದ ವ್ಯಕ್ತಿ ಸಿಗರೇಟ್ ನೀಡುವಂತೆ ಕೇಳಿದ್ದ.

ಆಗ ಕೃಷ್ಣಕಾಂತ್ ಮೌರ್ಯ ಹಣ ನೀಡುವಂತೆ ಹೇಳಿದ್ದು, ಇದರಿಂದ ಆಕ್ರೋಶ ಗೊಂಡ ಆತ ನನ್ನ ಬಳಿ ಹಣ ಕೇಳುತ್ತೀಯಾ ಎಂದು ಗಲಾಟೆ ಮಾಡಿ ಮೌರ್ಯ ನಿಗೆ ಹೊಡೆದು ತೆರಳಿದ್ದ.

ಕೆಲಹೊತ್ತಿನ ಬಳಿಕ ತನ್ನ ಸಹಚರರೊಂದಿಗೆ ಆಟೋದಲ್ಲಿ ಬಂದ ಆರೋಪಿ, ಮೌರ್ಯ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...