alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರೀಕರಣದ ವೇಳೆಯೇ ನಡೀತು ದುರಂತ

cinem-ben

ಬೆಂಗಳೂರು: ‘ಮಾಸ್ತಿಗುಡಿ’ ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲಿ, ಯುವನಟರಿಬ್ಬರು ಸಾವು ಕಂಡ ಘಟನೆ ಮರೆಯಾಗುವ ಮೊದಲೇ, ಮತ್ತೊಂದು ದುರಂತ ಸಂಭವಿಸಿದೆ.

ಜೂನಿಯರ್ ಆರ್ಟಿಸ್ಟ್ ಒಬ್ಬರು ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. 35 ವರ್ಷದ ಪದ್ಮಾವತಿ ಮೃತಪಟ್ಟವರು. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ, ನಂದಕಿಶೋರ್ ನಿರ್ದೇಶನದ ‘ಪ್ರೊಡಕ್ಷನ್ ನಂ 5’ ಚಿತ್ರೀಕರಣದ ಸಂದರ್ಭದಲ್ಲಿ ಪದ್ಮಾವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಯಲಹಂಕದ ಆವಲಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಚಿತ್ರೀಕರಣ ನಡೆಸಲಾಗಿದ್ದು, 120 ಕ್ಕೂ ಅಧಿಕ ಜೂನಿಯರ್ ಆರ್ಟಿಸ್ಟ್ ಗಳು ಭಾಗವಹಿಸಿದ್ದರು.

ಚಿತ್ರೀಕರಣ ಮುಗಿಸಿ ಎಲ್ಲರೂ ತೆರಳಿದ್ದು, ಆಗ ಆರ್ಟಿಸ್ಟ್ ಗಳ ಎಣಿಕೆ ಸಂದರ್ಭ ಒಬ್ಬರು ಮಿಸ್ ಆಗಿರುವುದು ಗೊತ್ತಾಗಿದೆ.

ಹುಡುಕಾಟ ನಡೆಸಿದಾಗ, ಪದ್ಮಾವತಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ಆಕೆಯ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಶೇಖರ್ ಎಂಬ ಏಜೆಂಟ್ ಪದ್ಮಾವತಿ ಅವರನ್ನು ಕರೆದುಕೊಂಡು ಬಂದಿದ್ದರೆನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ರಾಜನಕುಂಟೆ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...