alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ, ಸೈಕಲ್ ಭಾಗ್ಯದಿಂದ ವಂಚಿತರಾದ ಮಕ್ಕಳು

cycle for childrenಕೆಲ ತಿಂಗಳ ಹಿಂದೆ ತಾವೂ ಪೇಟೆಯ ಮಕ್ಕಳಂತೆಯೇ ಶೂ ಧರಿಸಿ ಶಾಲೆಗೆ ಹೋಗಬಹುದು. ಇನ್ನು ನಡೆದುಕೊಂಡು ದೂರದ ಶಾಲೆಗೆ ಹೋಗಬೇಕಿಲ್ಲ. ನಮಗೆ ಸರ್ಕಾರ ಸೈಕಲ್ ಕೊಡುತ್ತದೆ ಎಂದೆಲ್ಲ ಕನಸು ಕಂಡಿರುವ ಮಕ್ಕಳಿಗೆ ನಿರಾಶೆ ಕಾದಿದೆ. ಏಕೆಂದರೆ ಅನುದಾನದ ಕೊರತೆ ಹಿನ್ನಲೆಯಲ್ಲಿ ಶೂ ಮತ್ತು ಸೈಕಲ್ ಯೋಜನೆ ಸದ್ಯಕ್ಕೆ ಸ್ಥಗಿತಗೊಂಡಿದೆ.

ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾಗಿದ್ದ ಶೂ ಭಾಗ್ಯ ನೆಲಕಚ್ಚಿದೆ. ಅನುದಾನದ ಕೊರತೆ ಹಿನ್ನಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲೇ ವಿದ್ಯಾರ್ಥಿಗಳು ಇದರಿಂದ ವಂಚಿತರಾಗಿದ್ದರು. ಈ ಯೋಜನೆಗೆ ಅಗತ್ಯವಿರುವ 115 ಕೋಟಿಯನ್ನು ಹಣಕಾಸು ಇಲಾಖೆ ಕೊಟ್ಟಿಲ್ಲ. ಈ ಯೋಜನೆಗಾಗಿಯೇ ಸರ್ಕಾರ ಪ್ರತ್ಯೇಕ ಹಣವನ್ನು ಮೀಸಲಿಡಲಿಲ್ಲ.

ಶೂ ನಂತೆಯೇ ಸೈಕಲ್ ಯೋಜನೆ ಕೂಡ ಪಂಚರ್ ಆಗಿದೆ. ಏಕೆಂದರೆ ಇದುವರೆಗೂ ಸೈಕಲ್ ಖರೀದಿ ಟೆಂಡರ್ ಅಂತಿಮಗೊಂಡಿಲ್ಲ. ಟೆಂಡರ್ ಪರಿಶೀಲನೆಯಲ್ಲಿಯೇ ಸರ್ಕಾರ ಕಾಲ ಕಳೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...