alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ಯು. ಉಪನ್ಯಾಸಕರಿಂದ ‘ಕರಾಳ ಶಿವರಾತ್ರಿ’ ಆಚರಣೆ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪಿ.ಯು. ಉಪನ್ಯಾಸಕರು ಫೆಬ್ರವರಿ 13 ರಂದು ಕರಾಳ ಶಿವರಾತ್ರಿ ಆಚರಣೆಗೆ ನಿರ್ಧರಿಸಿದ್ದಾರೆ.

ಬೆಂಗಳೂರಿನ ಮೌರ್ಯ ಸರ್ಕಲ್ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಿದ್ದಾರೆ. ವೇತನ ಹೆಚ್ಚಳದ ಬೇಡಿಕೆಗೆ 6 ನೇ ವೇತನ ಆಯೋಗ ಸ್ಪಂದಿಸದಿರುವುದನ್ನು ವಿರೋಧಿಸಿ, ಕರಾಳ ಶಿವರಾತ್ರಿ ಆಚರಿಸಲು ಭಾನುವಾರ ನಡೆದ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪ್ರಾಂಶುಪಾಲರಿಗೆ ನೀಡುತ್ತಿದ್ದ 1000 ರೂ., ಉಪನ್ಯಾಸಕರಿಗೆ ನೀಡುತ್ತಿದ್ದ 500 ರೂ. ಎಕ್ಸ್ ಗ್ರೇಷಿಯಾವನ್ನು ಮೂಲವೇತನದಲ್ಲಿ ವಿಲೀನಗೊಳಿಸಬೇಕಿತ್ತು. ಪ್ರಾಂಶುಪಾಲರಿಗೆ ಪ್ರತ್ಯೇಕ ವೇತನ ಶ್ರೇಣಿ ಬಗ್ಗೆಯೂ ಶಿಫಾರಸು ಮಾಡಿಲ್ಲ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ವೇತನ ಆಯೋಗ ಬೇಡಿಕೆಯನ್ನು ಪರಿಗಣಿಸಿದ್ದಲ್ಲಿ ಮೂಲ ವೇತನ 52,650 ರೂ. ಆಗಬೇಕಿತ್ತು. ಆದರೆ, 43,100 ರೂ. ಆಗಿದ್ದು, ಇದಕ್ಕೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘದಿಂದ ವಿರೋಧ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...