alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಣೆಗೂ ಮೊದಲು ಈ ಸ್ಥಿತಿಯಲ್ಲಿತ್ತು ಹಾವು

ಶಿವಮೊಗ್ಗ: ಕಪ್ಪೆ ತಿನ್ನಲು ಹೋದ ನಾಗರಹಾವು ಬಿಯರ್ ಟಿನ್ ಒಳಗೆ ತಲೆ ತೂರಿಸಿಕೊಂಡು ಒದ್ದಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ನೆಹರೂ ಸ್ಟೇಡಿಯಂ ಬಳಿ ಹಾವು ಬಿಯರ್ ಟಿನ್ ಒಳಗೆ ತಲೆ ತೂರಿಸಿಕೊಂಡು ಹೊರತೆಯಲಾಗದೇ ಒದ್ದಾಡಿದ್ದು, ಟಿನ್ ಶಬ್ಧ ಬಂದ ಕಡೆಗೆ ನೋಡಿದಾಗ ಈ ದೃಶ್ಯ ಕಂಡು ಬಂದಿದೆ.

ಅಲ್ಲಿದ್ದವರು ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಹಾಗೂ ನಂದನ್ ಅವರು ಬಿಯರ್ ಟಿನ್ ನಿಂದ ಹಾವನ್ನು ಸುರಕ್ಷಿತವಾಗಿ ಬೇರ್ಪಡಿಸಿದ್ದಾರೆ. ತಲೆ ತೂರಿಸಿಕೊಂಡು ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ್ದು, ಸಮೀಪದ ಕಾಡಿಗೆ ಬಿಡಲಾಗುವುದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...