alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗರಹಾವನ್ನೇ ನುಂಗಿದ ಕಾಳಿಂಗ ಸರ್ಪ

havu

ಶಿವಮೊಗ್ಗ: ಮಂಗಳೂರು ಹೊರ ವಲಯದಲ್ಲಿ ಇತ್ತೀಚೆಗೆ, ಕೊಳಕು ಮಂಡಲ ಹಾವನ್ನು ನಾಗರಹಾವು ನುಂಗಿದ್ದು, ಭಾರೀ ಸುದ್ದಿಯಾಗಿತ್ತು.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಮುಂಡಳ್ಳಿ ಗ್ರಾಮದಲ್ಲಿ, ಕಾಳಿಂಗ ಸರ್ಪವೊಂದು ನಾಗರಹಾವನ್ನು ಸಂಪೂರ್ಣವಾಗಿ ನುಂಗಿದ ಘಟನೆ ವರದಿಯಾಗಿದೆ.

ಮುಂಡಳ್ಳಿ ಗ್ರಾಮದ ಹೊರ ವಲಯದಲ್ಲಿ ಕಾಳಿಂಗ ಸರ್ಪ ಹಾಗೂ ನಾಗರಹಾವು ಮುಖಾಮುಖಿಯಾಗಿವೆ. ಕಾಳಿಂಗವನ್ನು ಕಂಡ ನಾಗರಹಾವು ಕಾಲ್ಕಿತ್ತಿದ್ದು, ಸಮೀಪದಲ್ಲಿಯೇ ಇದ್ದ ಹುತ್ತದೊಳಗೆ ಸೇರಿಕೊಂಡಿದೆ. ಅದನ್ನು ಬೆನ್ನಟ್ಟಿದ ಕಾಳಿಂಗ ಹುತ್ತದೊಳಕ್ಕೆ ನುಗ್ಗಿದ್ದು, ಹಾವನ್ನು ಎಳೆದುಕೊಂಡು ಹೊರ ಬಂದಿದೆ. ಇದನ್ನು ಕಂಡ ಜನ ಆವಾಕ್ಕಾಗಿದ್ದಾರೆ. ಜನ ನೋಡುತ್ತಿರುವಾಗಲೇ ನಾಗರ ಹಾವನ್ನು ಕಾಳಿಂಗ ಸರ್ಪ ನುಂಗಿದೆ. ವಿಷಯ ತಿಳಿದ ಉರಗ ತಜ್ಞರು ಆಗಮಿಸಿ ಅದನ್ನು ಹಿಡಿದು ಸಮೀಪದ ಕಾಡಿಗೆ ಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...