alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಂಕೆ ನುಂಗಿದ ಹೆಬ್ಬಾವು ನೋಡಲು ಜನಸಾಗರ

img-20170821-wa0043

ಶಿವಮೊಗ್ಗ: ಭಾರೀ ಗಾತ್ರದ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, 2 ದಿನಗಳಿಂದ ಒಂದೇ ಜಾಗದಲ್ಲಿ ಬೀಡು ಬಿಟ್ಟಿದೆ.

ಶಿವಮೊಗ್ಗ ತಾಲ್ಲೂಕು ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದ ಅರಕೆರೆ ಸಮೀಪದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಜಿಂಕೆಯನ್ನು ನುಂಗಿದೆ. ಹೊಟ್ಟೆ ಭಾರವಾಗಿ ಹಾವಿಗೆ ಕದಲಲು ಸಾಧ್ಯವಾಗುತ್ತಿಲ್ಲ.

ಸ್ಥಳದಲ್ಲೇ ಬೀಡು ಬಿಟ್ಟಿರುವ ಹಾವನ್ನು ನೋಡಲು ಸುತ್ತಮುತ್ತಲಿನ ಜನ ಗುಂಪು, ಗುಂಪಾಗಿ ಆಗಮಿಸತೊಡಗಿದ್ದಾರೆ. ಹೆಬ್ಬಾವಿಗೆ ಕೆಲವರು ಕೆಣಕಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅದರ ಫೋಟೋ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವ ಮೂಲಕ ಹಿಂಸೆ ನೀಡಲು ಮುಂದಾಗಿದ್ದು, ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವಿನ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ.

ಪ್ರಾಣಿ ನುಂಗಿದ ಹೆಬ್ಬಾವನ್ನು ಸ್ಥಳಾಂತರಿಸಲು ಮುಂದಾದಲ್ಲಿ ಅದಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಹಾವು ಭಾರಿ ಗಾತ್ರದ ಪ್ರಾಣಿ ನುಂಗಿದಾಗ, ಮುಂದೆ ಚಲಿಸಲು ಸಾಧ್ಯವಾಗದೇ ನುಂಗಿದ ಪ್ರಾಣಿ ಜೀರ್ಣವಾಗುತ್ತಿದ್ದಂತೆ ಮುಂದೆ ಸಾಗುತ್ತದೆ ಎನ್ನಲಾಗಿದೆ.

ಈ ಹಾವು ಕೂಡ ತಲೆಯ ಭಾಗವನ್ನು ಮಾತ್ರ ಆಡಿಸುತ್ತಿದ್ದು ಮೈ ಭಾರವಾಗಿರುವ ಕಾರಣ ಸ್ಥಳದಲ್ಲೇ ಬೀಡು ಬಿಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...