alex Certify
ಕನ್ನಡ ದುನಿಯಾ       Mobile App
       

Kannada Duniya

ಗಣಪತಿ ಪೆಂಡಾಲ್ ಸಿದ್ಧತೆಯಲ್ಲಿ ಅವಘಡ

Ganpati-lights

ಶಿವಮೊಗ್ಗ: ಗಣಪತಿ ಪೆಂಡಾಲ್ ಬಳಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ, ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 24 ವರ್ಷದ ಸುನಿಲ್ ಮೃತಪಟ್ಟವರು.

ಶಿವಮೊಗ್ಗದ ಗಾಂಧಿನಗರದ ಗಾಂಧಿಪಾರ್ಕ್ ಸಮೀಪ ಯುವಕರ ಸಂಘದಿಂದ ಗಣಪತಿ ಪೆಂಡಾಲ್ ನಿರ್ಮಿಸಿದ್ದು, ಇಲ್ಲಿ ವಿದ್ಯುತ್ ಬಲ್ಬ್ ಗಳಿಂದ ಪೆಂಡಾಲ್ ಅಲಂಕರಿಸಲು ಸುನಿಲ್ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಅವರು ಮೃತಪಟ್ಟಿದ್ದಾರೆ. ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಸುನಿಲ್, ಗಣಪತಿ ಹಬ್ಬದ ಹಿನ್ನಲೆಯಲ್ಲಿ ಪೆಂಡಾಲ್ ಅಲಂಕರಿಸಲು ಕೆಲಸಕ್ಕೆ ಬಂದಿದ್ದರು.

ಅವರು ಕೆಲಸ ಮಾಡುವಾಗಲೇ, ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಯನಗರ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...