alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹಿತೆ ಆತ್ಮಹತ್ಯೆ, ಪತಿಗೆ ಸಂಬಂಧಿಕರಿಂದ ಗೂಸಾ

ಶಿವಮೊಗ್ಗ: ದೊಡ್ಡಪ್ಪನ ಮಗಳೊಂದಿಗೆ ಸಂಸಾರ ನಡೆಸಿ ಬಳಿಕ ಆಕೆಯ ಆತ್ಮಹತ್ಯೆಗೆ ಕಾರಣನಾದ ಯುವಕನಿಗೆ, ಸಂಬಂಧಿಕರೇ ಥಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.

ಭದ್ರಾವತಿ ತಮ್ಮಣ್ಣ ಕಾಲೋನಿ ನಿವಾಸಿಯಾಗಿರುವ 28 ವರ್ಷದ ಯುವಕ, 7 ನೇ ತರಗತಿ ಓದುತ್ತಿದ್ದ ದೊಡ್ಡಪ್ಪನ ಮಗಳನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಹೊಸಪೇಟೆಯಲ್ಲಿ 1 ವರ್ಷ ಸಂಸಾರ ನಡೆಸಿದ್ದಾನೆ. ಬಾಲಕಿಯ ಪೋಷಕರು ಭದ್ರಾವತಿ ಹೊಸಮನೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುವಾರ ರಾತ್ರಿ ಬಾಲಕಿ ಹೊಸಪೇಟೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಮೃತದೇಹದೊಂದಿಗೆ ಭದ್ರಾವತಿಗೆ ಆಗಮಿಸಿದ ಯುವಕನಿಗೆ ಸಂಬಂಧಿಕರೆಲ್ಲಾ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬಾಲಕಿಯ ಸಾವಿಗೆ ಯುವಕನೇ ಕಾರಣವೆಂದು ಆತನನ್ನು ಥಳಿಸಿದ್ದು, ತಡೆಯಲು ಬಂದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಕೊನೆಗೆ ಲಘು ಲಾಠಿ ಪ್ರಹಾರ ನಡೆಸಿದ ಪೊಲೀಸರು ಆತನನ್ನು ರಕ್ಷಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...