alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯಿಂದಲೇ ಕೊಲೆಯಾದ ರೌಡಿ ಶೀಟರ್

ಶಿವಮೊಗ್ಗ: ಮದ್ಯ ಸೇವಿಸಿ ಕಾಟ ಕೊಡುತ್ತಿದ್ದ ಪತಿಯನ್ನು ಪತ್ನಿಯೇ ತಮ್ಮನೊಂದಿಗೆ ಸೇರಿ ಹತ್ಯೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ರೌಡಿಶೀಟರ್ ಸಂತೋಷ್ ಕೊಲೆಯಾದ ಯುವಕ. ಪ್ರೀತಿಸಿ ಮದುವೆಯಾಗಿದ್ದ ಸಂತೋಷ್ ಗೆ ಒಬ್ಬ ಮಗನಿದ್ದಾನೆ. ದಿನಾಲು ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕಾರಣ ಆತನ ಪತ್ನಿಯೇ ತನ್ನ ಚಿಕ್ಕಮ್ಮ, ತಮ್ಮನೊಂದಿಗೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.

ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ದೊಣ್ಣೆ, ಚಾಕು, ಕಲ್ಲಿನಿಂದ ಸಂತೋಷ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಸಂತೋಷ್ ಮೃತಪಟ್ಟಿದ್ದು, ವ್ಯಾನ್ ನಲ್ಲಿ ಆತನ ಮೃತದೇಹವನ್ನು ಹೊರವಲಯಕ್ಕೆ ಒಯ್ದು ಬಿಸಾಡಿದ್ದಾರೆ. ಶವ ಗುರುತು ಸಿಗಬಾರದೆಂದು ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ.

ಮೃತದೇಹ ಕಂಡು ಬಂದ ಮತ್ತು ದಂಪತಿ ನಡುವೆ ಜಗಳವಾಗಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...