alex Certify
ಕನ್ನಡ ದುನಿಯಾ       Mobile App
       

Kannada Duniya

ದುಂಬಾಲು ಬಿದ್ದ ಯುವಕ, ದುಡುಕಿದ ಯುವತಿ

ಶಿವಮೊಗ್ಗ: ಪ್ರೀತಿಸುವಂತೆ ಯುವಕ ಪೀಡಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ, ಶಿವಮೊಗ್ಗದ ವೆಂಕಟೇಶನಗರದಲ್ಲಿ ನಡೆದಿದೆ.

ಮಲವಗೊಪ್ಪದ 23 ವರ್ಷದ ಯುವತಿ ವೆಂಕಟೇಶನಗರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದು, ಮಾಚೇನಹಳ್ಳಿಯ ಬಿ.ಪಿ.ಒ.ಗೆ ಕೆಲಸಕ್ಕೆ ಹೋಗುತ್ತಿದ್ದರು. ಲಕ್ಷ್ಮಿ ಟಾಕೀಸ್ ಬಳಿ ಮೊಬೈಲ್ ಶಾಪ್ ಹೊಂದಿರುವ ಯುವಕ ಪ್ರೀತಿಸುವಂತೆ ಯುವತಿಗೆ ಕಾಟ ಕೊಡುತ್ತಿದ್ದ. ಆತನ ಕಾಟದಿಂದ ಬೇಸತ್ತ ಯುವತಿ, ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತಳ ಪೋಷಕರು ಜಯನಗರ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...