alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ಲವ್ ಸ್ಟೋರಿಯೇ ಮುಳುವಾಯ್ತು ಈಕೆಯ ಪಾಲಿಗೆ

ಶಿವಮೊಗ್ಗ: ಇಬ್ಬರನ್ನು ಲವ್ ಮಾಡಿದ ಯುವತಿಯೊಬ್ಬಳು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಪ್ರಾಪ್ತೆಯನ್ನು ಲವ್ ಮಾಡಿದ್ದ ತಪ್ಪಿಗೆ ಈಕೆಯ ಮೊದಲ ಪ್ರಿಯಕರ ಜೈಲು ಸೇರಿದ್ದಾನೆ. ಹಳೆ ಲವ್ ಸ್ಟೋರಿ ಗೊತ್ತಾಗಿ ಹೊಸ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದಾನೆ.

ಶಿವಮೊಗ್ಗದ ಕಾಶೀಪುರ ಗೇಟ್ ನಿವಾಸಿಯಾಗಿರುವ ಯುವತಿ ಬೊಮ್ಮನಕಟ್ಟೆಯ ಚಾಲಕನನ್ನು ಲವ್ ಮಾಡಿದ್ದು, ಇಬ್ಬರ ಮನೆಯವರೂ ಒಪ್ಪಿ ನಿಶ್ಚಿತಾರ್ಥ ನೆರವೇರಿದೆ.

ಇವರ ನಿಶ್ಚಿತಾರ್ಥದ ಫೋಟೋವನ್ನು ನೋಡಿದ ಚಾಲಕನ ಸ್ನೇಹಿತ ಯುವತಿಯ ಹಳೆಯ ಲವ್ ಸ್ಟೋರಿ ಬಗ್ಗೆ ತಿಳಿಸಿದ್ದಾನೆ.

ಪಿ.ಯು.ಸಿ. ಓದುವ ಸಂದರ್ಭದಲ್ಲಿ ಯುವಕನೊಬ್ಬನನ್ನು ಲವ್ ಮಾಡಿದ್ದ ಯುವತಿ ಆತನೊಂದಿಗೆ ಓಡಿ ಹೋಗಿದ್ದಾಳೆ. ಬಳಿಕ ವಾಪಸ್ ಬಂದಿದ್ದು, ಆಕೆ ಅಪ್ರಾಪ್ತಳಾಗಿದ್ದ ಕಾರಣ ಪ್ರಿಯಕರ ಜೈಲು ಸೇರಿದ್ದಾನೆ.

ಈ ವಿಚಾರ ನಿಶ್ಚಿತಾರ್ಥ ಮಾಡಿಕೊಂಡ ಚಾಲಕನಿಗೆ ಗೊತ್ತಾಗಿ ಮದುವೆಯಾಗಲು ನಿರಾಕರಿಸಿದ್ದಾನೆ. ನೊಂದ ಯುವತಿ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...