alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗಕ್ಕೆ ಬಸವೇಶ್ವರ ಪುತ್ಥಳಿ ನೀಡಿದ ನೀರಜ್ ಪಾಟೀಲ್

ಲಂಡನ್: ಲಂಡನ್ ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ನೀರಜ್ ಪಾಟೀಲ್ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಗೆ ಶ್ರೀ ಬಸವೇಶ್ವರರ ಪುತ್ಥಳಿಯನ್ನು ನೀಡಿದ್ದಾರೆ.

2015 ರ ನವೆಂಬರ್ ನಲ್ಲಿ ಲಂಡನ್ ಸಂಸತ್ ಭವನದ ಎದುರು ಪ್ರತಿಷ್ಠಾಪಿಸಿದ್ದ ಬಸವೇಶ್ವರರ ಪುತ್ಥಳಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಅದೇ ಮಾದರಿಯ ಸುಮಾರು 30 ಲಕ್ಷ ರೂ.ನ ಪ್ರತಿಮೆಯನ್ನು ನೀರಜ್ ಪಾಟೀಲ್ ಶಿವಮೊಗ್ಗ ಮಹಾನಗರ ಪಾಲಿಕೆಗೆ ಉಚಿತವಾಗಿ ನೀಡಿದ್ದಾರೆ. ಮೇಯರ್ ಏಳುಮಲೈ ಅವರ ನೇತೃತ್ವದ ತಂಡ ಪುತ್ಥಳಿಯನ್ನು ಪಡೆದುಕೊಂಡಿದೆ.

ಶಿವಮೊಗ್ಗದ ಬಸವೇಶ್ವರ ಸರ್ಕಲ್ ನಲ್ಲಿ ಗಾಂಧಿ ಪಾರ್ಕ್ ಪ್ರವೇಶ ದ್ವಾರದಲ್ಲಿ ಪೀಠವನ್ನು ನಿರ್ಮಿಸಿ, ಅದರ ಮೇಲೆ ಬಸವೇಶ್ವರರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...