alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ ಮುಗಿದ ಮೇಲೆ ಯುವತಿಗೆ ಕೈಕೊಟ್ಟ ಇಂಜಿನಿಯರ್ ಅರೆಸ್ಟ್

ಶಿವಮೊಗ್ಗ: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಕೈಕೊಟ್ಟ ಕೆ.ಪಿ.ಟಿ.ಸಿ.ಎಲ್. ಇಂಜಿನಿಯರ್ ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಕಾವೇರಿ ಭವನದಲ್ಲಿ ಇಂಜಿನಿಯರ್ ಆಗಿರುವ ಯುವಕ, ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿರುವ ಯುವತಿಯನ್ನು ಮದುವೆಯಾಗುವುದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಕುಟುಂಬದವರೆಲ್ಲಾ ಒಪ್ಪಿ 2017 ರ ಫೆಬ್ರವರಿ 15 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಕೆಲವು ತಿಂಗಳ ಬಳಿಕ ಮದುವೆಯಾಗುವುದಾಗಿ ಯುವಕ ತಿಳಿಸಿದ್ದಾನೆ.

ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನು ಹಲವು ಸಲ ಭೇಟಿಯಾಗಿದ್ದ ಆತ, ಲಾಡ್ಜ್ ಗಳಿಗೆ ಕರೆದೊಯ್ದು ದೈಹಿಕ ಸಂಪರ್ಕ ಕೂಡ ಬೆಳೆಸಿದ್ದಾನೆ. ನಿಶ್ಚಿತಾರ್ಥ ನೆರವೇರಿದ್ದು, ಕೆಲವೇ ತಿಂಗಳಲ್ಲಿ ಮದುವೆ ನಡೆಯಲಿದೆ ಎಂದು ಭಾವಿಸಿದ ಯುವತಿ ಆತ ಹೇಳಿದಂತೆ ಕೇಳಿದ್ದಾಳೆ.

ಆದರೆ, ಯುವಕ ಇತ್ತೀಚೆಗೆ ಯುವತಿಯಿಂದ ದೂರವಾಗಿದ್ದಾನೆ. ಆಕೆ ಬೆಂಗಳೂರಿಗೆ ತೆರಳಿ ವಿಚಾರಿಸಿದಾಗ, ರಜೆ ಹಾಕಿರುವುದು ಗೊತ್ತಾಗಿದೆ. ಹಲವು ಕಡೆ ವಿಚಾರಿಸಿದಾಗ ಆತ ಕಳೆದ ವರ್ಷ ಡಿಸೆಂಬರ್ ನಲ್ಲೇ ಮದುವೆಯಾಗಿರುವುದು ಗೊತ್ತಾಗಿದೆ. ಇದರಿಂದ ಆಘಾತಕ್ಕೆ ಒಳಗಾದ ಯುವತಿ ಮತ್ತು ಆಕೆಯ ಕುಟುಂಬದವರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

ಅತ್ಯಾಚಾರ, ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...