alex Certify
ಕನ್ನಡ ದುನಿಯಾ       Mobile App
       

Kannada Duniya

ಹುತಾತ್ಮ ಯೋಧನ ಪತ್ನಿಯ ಅಳಲು

smg-yoda

ಶಿವಮೊಗ್ಗ: ಹುತಾತ್ಮ ಯೋಧರೊಬ್ಬರ ಪತ್ನಿ ನೆರವು ಪಡೆಯಲು, ಕಚೇರಿಗೆ ಅಲೆದಾಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲ್ಲೂಕಿನ ವೀರಗೊಂಡನಕೊಪ್ಪದ ಉಮೇಶ್ 2016 ರ ಜುಲೈ 17 ರಂದು ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಬಂಡೆ ಕುಸಿದು ಮೃತಪಟ್ಟಿದ್ದರು.

ಘಟನೆ ನಡೆದು 8 ತಿಂಗಳುಗಳು ಕಳೆದರೂ, ಮೃತ ಯೋಧನ ಪತ್ನಿಗೆ ರಾಜ್ಯ ಸರ್ಕಾರವೇ ಘೋಷಿಸಿದಂತೆ ಪರಿಹಾರ ಮೊತ್ತ ಇದುವರೆಗೂ ತಲುಪಿಲ್ಲ. ಮೃತ ಯೋಧನ ಪತ್ನಿ ವೀಣಾ ಉಮೇಶ್ ಪರಿಹಾರ ಮೊತ್ತ ಪಡೆಯುವುದಕ್ಕಾಗಿ ಕಛೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದರೂ ಸ್ಪಂದನೆ ದೊರೆತಿಲ್ಲ. ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಯೋಧನ ಪತ್ನಿಗೆ ಉದ್ಯೋಗವೂ ದೊರಕಿಲ್ಲ. ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ವೀಣಾ ತಮಗೆ ಜಮೀನು, ಪರಿಹಾರ ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ. ಲೋಕೇಶ್, ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...