alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಗೆ ಕಿರುಕುಳ ನೀಡಿದ ಕಾಮುಕರಿಗೆ ಗೂಸಾ

ಶಿವಮೊಗ್ಗ: ಒಂಟಿಯಾಗಿ ಮನೆಗೆ ತೆರಳುತ್ತಿದ್ದ ಯುವತಿಗೆ ಕಿರುಕುಳ ನೀಡಿದ ನಾಲ್ವರು ಕಾಮುಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ರಾಮಕೃಷ್ಣಪುರ ಗ್ರಾಮದ ವಿದ್ಯಾರ್ಥಿನಿ ಮನೆಗೆ ತೆರಳುವಾಗ ಒಮಿನಿಯಲ್ಲಿ ಆಗಮಿಸಿದ್ದ ಯುವಕರು ತಮ್ಮೊಂದಿಗೆ ಬರುವಂತೆ ಯುವತಿಯನ್ನು ಕರೆದಿದ್ದು, ಆಕೆ ತಪ್ಪಿಸಿಕೊಂಡು ಬಂದಿದ್ದಾಳೆ.

ಫೋನ್ ಮೂಲಕ ತಂದೆಗೆ ವಿಷಯ ತಿಳಿಸಿದ್ದು, ಇದನ್ನು ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಯುವಕರನ್ನು ವಿಚಾರಿಸಿ ಗೂಸಾ ನೀಡಿದ್ದಾರೆ. ಬಳಿಕ ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನ ಯುವಕರು ತೀರ್ಥಹಳ್ಳಿಯಲ್ಲಿ ವಿವಿಧ ಕೆಲಸಕ್ಕಾಗಿ ಬಂದವರಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಏಪ್ರಿಲ್ 10 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...