alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿ ಸಾವಿಗೆ ಕಾರಣವಾಯ್ತು ಮಗನ ಹೇರ್ ಸ್ಟೈಲ್

smg-suisd

ಶಿವಮೊಗ್ಗ: ಸಿನಿಮಾ ನಟನ ರೀತಿಯಲ್ಲಿ ಮಗ ಕಟಿಂಗ್ ಮಾಡಿಸಿಕೊಂಡಿದ್ದಕ್ಕೆ ಬೇಸರಗೊಂಡ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ವಿನೋಬನಗರದಲ್ಲಿ ವಾಸವಾಗಿರುವ ಖಾಸಗಿ ಶಾಲೆಯ ಶಿಕ್ಷಕಿ(47) ಆತ್ಮಹತ್ಯೆ ಮಾಡಿಕೊಂಡವರು. 9 ನೇ ತರಗತಿ ಓದುತ್ತಿದ್ದ ಅವರ ಪುತ್ರ ಇತ್ತೀಚೆಗೆ ಟ್ರೆಂಡ್ ಆಗಿರುವ ನಟನ ಹೇರ್ ಸ್ಟೈಲ್ ರೀತಿಯಲ್ಲಿ ಕಟಿಂಗ್ ಮಾಡಿಸಿಕೊಂಡು ಬಂದಿದ್ದಾನೆ.

ಶಾಲೆಯಲ್ಲಿ ಮಕ್ಕಳು ಇಂತಹ ಕಟಿಂಗ್ ಮಾಡಿಸಿಕೊಂಡು ಬಂದಾಗ ನಾನೇ ಬೈದು ಕಳಿಸುವೆ. ಹೀಗಿರುವಾಗ, ನನ್ನ ಮಗನಾಗಿ ಇಂತಹ ಕಟಿಂಗ್ ಮಾಡಿಸಿಕೊಂಡಿದ್ದು ಸರಿಯಲ್ಲ ಎಂದು ಶಿಕ್ಷಕಿ ಹೇಳಿದ್ದಾರೆ.

ಮತ್ತೊಮ್ಮೆ ಸರಿಯಾಗಿ ಕಟಿಂಗ್ ಮಾಡಿಸಿಕೊಂಡು ಬರುವಂತೆ ಹೇಳಿದ್ದು, ಇದಕ್ಕೆ ಮಗ ಒಪ್ಪಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...