alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಅಪಹರಿಸಿ ನಾಲೆಗೆ ತಳ್ಳಿದರು

ಶಿವಮೊಗ್ಗ: ಶಾಲಾ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು, ಕೊಲೆಗೆ ಯತ್ನಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಗೋಪಾಳ ನಿವಾಸಿ ಮಲ್ಲೇಶಪ್ಪ ಅವರ ಪುತ್ರಿ ಈಶ್ವರಿ ಅಪಹರಣಕ್ಕೆ ಒಳಗಾದ ಬಾಲಕಿ. 10 ನೇ ತರಗತಿ ಓದುತ್ತಿರುವ ಈಶ್ವರಿಯನ್ನು ವ್ಯಾನ್ ನಲ್ಲಿ ಅಪಹರಿಸಿದ ದುಷ್ಕರ್ಮಿಗಳು, ಮುಖಕ್ಕೆ ಬಟ್ಟೆ ಕಟ್ಟಿ, ತುಂಗಾ ಮೇಲ್ದಂಡೆ ನಾಲೆಗೆ ತಳ್ಳಿದ್ದಾರೆ.

ಆಳವಾಗಿರುವ ನಾಲೆಯಲ್ಲಿ ಬಾಲಕಿ ಕಿರುಚಾಟ ಕೇಳಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಈಶ್ವರಿಯನ್ನು ರಕ್ಷಿಸಿದ್ದಾರೆ.

ಬಾಲಕಿಯನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ. ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...