alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆಕೋರರ ಮೇಲೆ ಪಿ.ಎಸ್.ಐ. ಫೈರಿಂಗ್

firi

ಶಿವಮೊಗ್ಗ: ದರೋಡೆಕೋರರ ಮೇಲೆ, ಪಿ.ಎಸ್.ಐ. ಫೈರಿಂಗ್ ಮಾಡಿದ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ.

ಸಮೀಪದ ಪುರದಾಳ್ ಗ್ರಾಮದ ನಾಗರಾಜ್ ಹಾಗೂ ಕಲಾವತಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಇರ್ಫಾನ್ ಮತ್ತು ನರಸಯ್ಯ ಎಂಬುವವರು ಅಡ್ಡಗಟ್ಟಿ ದರೋಡೆ ಮಾಡಲು ಮುಂದಾಗಿದ್ದು, ಹಲ್ಲೆಗೆ ಯತ್ನಿಸಿದ್ದಾರೆ.

ಇದರಿಂದ ನಾಗರಾಜ್ ಹಾಗೂ ಕಲಾವತಿ ಕೂಗಿಕೊಂಡಿದ್ದು, ಇದೇ ಮಾರ್ಗದಲ್ಲಿ ರೌಂಡ್ಸ್ ಗೆ ಹೋಗುತ್ತಿದ್ದ ತುಂಗಾನಗರ ಠಾಣೆ ಪಿ.ಎಸ್.ಐ. ಗಿರೀಶ್ ಸ್ಥಳಕ್ಕೆ ಧಾವಿಸಿದ್ದಾರೆ.

ದರೋಡೆಕೋರರಾದ ಇರ್ಫಾನ್ ಹಾಗೂ ನರಸಯ್ಯ ಮಾರಕಾಸ್ತ್ರಗಳಿಂದ ಗಿರೀಶ್ ಅವರನ್ನು ಥಳಿಸಲು ಮುಂದಾಗಿದ್ದು, ಆತ್ಮರಕ್ಷಣೆಗಾಗಿ ಗಿರೀಶ್ ಫೈರಿಂಗ್ ಮಾಡಿದ್ದಾರೆ.

ಇರ್ಫಾನ್ ಕಾಲಿಗೆ ಗಾಯಗಳಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ನರಸಯ್ಯ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...