alex Certify
ಕನ್ನಡ ದುನಿಯಾ       Mobile App
       

Kannada Duniya

ಬಾರದ ಲೋಕಕ್ಕೆ ದರ್ಶನ್ ಅಭಿಮಾನಿ

ಶಿವಮೊಗ್ಗ: ವಿಡಿಯೋ ಕಾಲ್ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಮಾತನಾಡಿದ್ದ ಅಭಿಮಾನಿ ರೇವಂತ್ ಕೊನೆಯುಸಿರೆಳೆದಿದ್ದಾರೆ.

ರೇವಂತ್, ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ಎಲ್ಲಾ ಚಿತ್ರಗಳನ್ನು ನೋಡಿದ್ದಾರೆ. ಪ್ರತಿ ಹುಟ್ಟುಹಬ್ಬಕ್ಕೆ ಬೆಂಗಳೂರಿಗೆ ತೆರಳಿ ದರ್ಶನ್ ಅವರಿಗೆ ಶುಭಾಶಯ ಹೇಳುತ್ತಿದ್ದ ರೇವಂತ್ ಅವರಿಗೆ ದರ್ಶನ್ ಅಂದ್ರೇ ಪಂಚ ಪ್ರಾಣ.

ದುರಾದೃಷ್ಟವಶಾತ್ ರೇವಂತ್ ಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ದರ್ಶನ್ ಅವರೊಂದಿಗೆ ಮಾತನಾಡಬೇಕೆಂಬುದು ರೇವಂತ್ ಆಸೆಯಾಗಿತ್ತು. ಇದನ್ನು ತಿಳಿದ ದರ್ಶನ್ ಅವರೇ ವಿಡಿಯೋ ಕಾಲ್ ಮಾಡಿ ಆಸ್ಪತ್ರೆಯಲ್ಲಿದ್ದ ರೇವಂತ್ ಅವರೊಂದಿಗೆ ಮಾತನಾಡಿದ್ದರು. ಆತ್ಮಸ್ಥೈರ್ಯವನ್ನು ತುಂಬಿದ್ದರು.

ಕೊನೆ ಆಸೆಯಂತೆ ದರ್ಶನ್ ಅವರೊಂದಿಗೆ ಮಾತನಾಡಿದ ರೇವಂತ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...