alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರಿಂದ ತಪ್ಪಿಸಿಕೊಳ್ಳಲೋಗಿ ನದಿಗೆ ಹಾರಿ ಮೃತಪಟ್ಟ ರೌಡಿ

student_suicide

ಶಿವಮೊಗ್ಗದ ರೋಟರಿ ಚಿತಾಗಾರದ ಹಿಂಭಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದ ಗ್ಯಾಂಗ್ ಒಂದರ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಪ್ಪಿಸಿಕೊಂಡು ಹೋಗುವ ಭರದಲ್ಲಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಚಿತಾಗಾರದ ಹಿಂಭಾಗದಲ್ಲಿನ ತುಂಗಾ ನದಿಯಲ್ಲಿ ರೌಡಿ ಶೀಟರ್ ಭದ್ರ (30) ಶವವಾಗಿ ಪತ್ತೆಯಾಗಿದ್ದು, ಮೀನಿನ ಬಲೆಗೆ ಸಿಕ್ಕಿ ಹಾಕಿಕೊಂಡು ಸಾವು ಕಂಡಿದ್ದಾನೆ. ಪೊಲೀಸರ ದಾಳಿ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ನದಿಗೆ ಹಾರಿದ್ದು, ಮೀನಿಗಾಗಿ ಹಾಕಲಾಗಿದ್ದ ಬಲೆಗೆ ಸಿಲುಕಿ ಸಾವು ಕಂಡಿದ್ದಾನೆ ಎನ್ನಲಾಗಿದೆ.

ಭದ್ರ ಇಸ್ಪೀಟ್ ಜೂಜಾಟದಲ್ಲಿ ತೊಡಗಿಕೊಂಡಿರಲಿಲ್ಲ ಎನ್ನಲಾಗುತ್ತಿದ್ದು, ತನ್ನನ್ನು ಹಿಡಿಯಲು ಪೊಲೀಸರು ಬಂದಿದ್ದಾರೆಂದು ಭಾವಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದನೆಂದು ಹೇಳಲಾಗುತ್ತಿದೆ. ಭದ್ರ ಮತ್ತೊಬ್ಬ ರೌಡಿ ಮೆಂಟಲ್ ಸೀನನ ಕೊಲೆ ಕೇಸಿನಲ್ಲಿ ಆರೋಪಿ ಕೂಡ ಆಗಿದ್ದ. ಈತನ ವಿರುದ್ದ ಕೊಲೆ, ಸುಲಿಗೆ, ದರೋಡೆ ಕೇಸುಗಳು ದಾಖಲಾಗಿದ್ದವು. ಕೋಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...