alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತಿ ಬೆಳೆದ ರೈತರಿಗೆ ಶಾಕಿಂಗ್ ನ್ಯೂಸ್

ಶಿವಮೊಗ್ಗ: ಹತ್ತಿ ಬೆಳೆದ ರೈತರು ದಿಢೀರ್ ಬೆಲೆ ಕುಸಿತಕ್ಕೆ ಪ್ರತಿಭಟನೆ ನಡೆಸಿದ್ದಲ್ಲದೇ, ಮಾರಲು ತಂದಿದ್ದ ಹತ್ತಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಎ.ಪಿ.ಎಂ.ಸಿ.ಯಲ್ಲಿ ಹತ್ತಿ ಧಾರಣೆ ದಿಢೀರ್ ಕುಸಿತ ಕಂಡಿದೆ. ಕ್ವಿಂಟಾಲ್ ಗೆ 7000 ರೂ. ಇದ್ದ ಹತ್ತಿ ಬೆಲೆ, 1000 ರೂ. ಕಡಿಮೆಯಾಗಿ, 6000 ರೂ.ಗೆ ಇಳಿದಿದೆ.

ಶಿವಮೊಗ್ಗ ಸುತ್ತಮುತ್ತಲಿನ ರೈತರು ಬೆಳೆದ ಹತ್ತಿಯನ್ನು ಎ.ಪಿ.ಎಂ.ಸಿ.ಯಲ್ಲಿ ಮಾರಾಟಕ್ಕೆ ತಂದಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹತ್ತಿ ಮಾರುಕಟ್ಟೆಗೆ ಬಂದಿದ್ದರಿಂದ ಬೆಲೆ ಕಡಿಮೆಯಾಗಿದೆ. ಏಕಾಏಕಿ ಬೆಲೆ ಕುಸಿಯಲು ಕೆಲವು ವರ್ತಕರು ಕಾರಣ ಎಂದು ಆರೋಪಿಸಿ ರೈತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಹತ್ತಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಾರದಿಂದ 7000 ರೂ. ಬೆಲೆಯಲ್ಲಿ ಹತ್ತಿ ಮಾರಾಟವಾಗುತ್ತಿತ್ತು. ಈಗ 6000 ರೂ.ಗೆ ಇಳಿದಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...