alex Certify
ಕನ್ನಡ ದುನಿಯಾ       Mobile App
       

Kannada Duniya

ಭದ್ರಾವತಿ ಪೊಲೀಸರಿಂದ ಭರ್ಜರಿ ಬೇಟೆ

img-20170725-wa0018

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ 5 ಮಂದಿ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ವಾಹನಗಳು, ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಭದ್ರಾವತಿಯ ಪುನೀತ್, ಪ್ರದೀಪ್, ಆಂಥೋನಿ, ಮಂಜುನಾಥ ಹಾಗೂ ಮುಕುಂದ ಬಂಧಿತರು.

ಭದ್ರಾವತಿ, ತರೀಕೆರೆ, ಕಡೂರು, ಶಿವಮೊಗ್ಗ, ಕೂಡ್ಲಿಗಿ ಮೊದಲಾದ ಕಡೆಗಳಲ್ಲಿ ಇವರು ಕಳವು ಮಾಡಿದ್ದ 2 ಕಾರ್, 14 ದ್ವಿಚಕ್ರ ವಾಹನ, 2 ಕಂಪ್ಯೂಟರ್ ಸೆಟ್,  3 ಪ್ರಿಂಟರ್,  ಕ್ಯಾಮೆರಾ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಭದ್ರಾವತಿಯಲ್ಲಿ ಇತ್ತೀಚೆಗೆ ವಾಹನ ಕಳವು ಪ್ರಕರಣ ಹೆಚ್ಚಿದ ಹಿನ್ನಲೆಯಲ್ಲಿ ಎಸ್.ಪಿ. ಅಭಿನವ್ ಖರೆ, ಎ.ಎಸ್.ಪಿ. ಮುತ್ತುರಾಜ್, ಡಿ.ವೈ.ಎಸ್.ಪಿ. ಶಿವಕುಮಾರ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು.

ವೃತ್ತ ನಿರೀಕ್ಷಕ ಟಿ.ಕೆ. ಚಂದ್ರಶೇಖರ್ ನೇತೃತ್ವದ ತಂಡದಲ್ಲಿ ಪಿ.ಎಸ್.ಐ.(ಕ್ರೈಂ) ಶಾಂತಮ್ಮ, ನ್ಯೂಟೌನ್ ಠಾಣೆ ಎ.ಎಸ್.ಐ.ಗಳಾದ ನಾಗರಾಜ್, ಬಸವರಾಜಪ್ಪ, ಸಿಬ್ಬಂದಿಗಳಾದ ಶ್ರೀಹರ್ಷ, ಆದರ್ಶ ಶೆಟ್ಟಿ, ಹನುಮಂತ, ನಾಗರಾಜ ಸಿ.ಎನ್., ಮಾರುತಿ, ರೇವಣ ಸಿದ್ದಪ್ಪ, ಮಧು, ರಂಗಸ್ವಾಮಿ, ಹೋಮ್ ಗಾರ್ಡ್ ಗಳಾದ ಇದಾಯತ್, ಕೃಷ್ಣೇಗೌಡ, ಚಂದ್ರಪ್ಪ ಇದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...