alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೆಂಡ್ಸ್ ಜೊತೆಗಿದ್ದ ಯುವತಿಗೆ ರಸ್ತೆಯಲ್ಲೇ ಕಿರುಕುಳ

ಶಿವಮೊಗ್ಗ: ಗೆಳೆಯ ಹಾಗೂ ಗೆಳತಿಯೊಂದಿಗೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಕಿರುಕುಳ ನೀಡಿದ ಘಟನೆ ಶಿವಮೊಗ್ಗದ ಮದಾರಿಪಾಳ್ಯ ಬಳಿ ನಡೆದಿದೆ.

ಅನ್ಯ ಕೋಮಿಗೆ ಸೇರಿದ, ತನ್ನದೇ ಕಾಲೇಜಿನ ಗೆಳೆಯ ಮತ್ತು ಗೆಳತಿಯೊಂದಿಗೆ ಯುವತಿ ತೆರಳುವಾಗ, ಯುವತಿಯ ಕೋಮಿಗೆ ಸೇರಿದ ಸ್ಥಳೀಯ ಯುವಕರು ಅಡ್ಡಗಟ್ಟಿದ್ದಾರೆ. ಮೂವರನ್ನೂ ಬೆದರಿಸಿದ್ದಾರೆ. ಇದರಿಂದಾಗಿ ಯುವತಿಯ ಸ್ನೇಹಿತ ಮತ್ತು ಸ್ನೇಹಿತೆ ಅಲ್ಲಿಂದ ತೆರಳಿದ್ದು, ನಂತರ ಯುವತಿಯನ್ನು ತರಾಟೆಗೆ ತೆಗೆದುಕೊಂಡ ಯುವಕರು, ಆಕೆಯ ಮೊಬೈಲ್, ದ್ವಿಚಕ್ರವಾಹನ, ಹಣ ಕಸಿದುಕೊಂಡಿದ್ದಾರೆ. ಬೇರೆ ಕೋಮಿನ ಯುವಕನೊಂದಿಗೆ ಸುತ್ತಾಡದಂತೆ ತಾಕೀತು ಮಾಡಿ ಹಲ್ಲೆ ಮಾಡಿದ್ದಾರೆ.

ಬಳಿಕ ಮೊಬೈಲ್, ವಾಹನ ಕೊಟ್ಟು ಕಳಿಸಿದ್ದಾರೆ. ಸಂಜೆ ಯುವತಿಯ ಮನೆಗೂ ಹೋಗಿ ಬೆದರಿಸಿದ್ದಾರೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆಯಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತರನ್ನು ಅಡ್ಡಗಟ್ಟಿ ಬೆದರಿಸಿದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...