alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಖದೀಮರು

ಶಿವಮೊಗ್ಗ: ಎ.ಟಿ.ಎಂ. ದೋಚಲು ಬಂದಿದ್ದ ಮೂವರು ಖದೀಮರು ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಘಟನೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ ಹೊರವಲಯದ ಕುವೆಂಪು ವಿಶ್ವವಿದ್ಯಾಲಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಗೆ ಸೇರಿದ ಎ.ಟಿ.ಎಂ. ದೋಚಲು ವಾಹನವೊಂದರಲ್ಲಿ ದರೋಡೆಕೋರರ ತಂಡ ಆಗಮಿಸಿದೆ.

ರಾತ್ರಿ ಎ.ಟಿ.ಎಂ. ಕೇಂದ್ರದ ಒಳಗೆ ನುಗ್ಗಿದ ಮೂವರು ಯಂತ್ರವನ್ನು ದೋಚಲು ಯತ್ನಿಸಿದ್ದಾರೆ. ಶಬ್ಧ ಬಂದ ಕಾರಣ ಸ್ಥಳೀಯರು ಬಂದು ನೋಡಿದ್ದು, ಅವರ ಮೇಲೆಯೇ ದರೋಡೆಕೋರರು ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ.

ಆಗ ಸ್ಥಳೀಯರು ಎ.ಟಿ.ಎಂ. ಒಳಗೆ ಮೂವರನ್ನು ಕೂಡಿ ಹಾಕಿದ್ದು, ವಾಹನದಲ್ಲಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ತುಂಗಾನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎ.ಟಿ.ಎಂ. ಒಳಗೆ ಬಂಧಿಯಾಗಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ತಂಡ ವ್ಯವಸ್ಥಿತವಾಗಿ ಎ.ಟಿ.ಎಂ.ಗಳನ್ನು ದೋಚುತ್ತಿತ್ತು ಎನ್ನಲಾಗಿದ್ದು, ತನಿಖೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...