alex Certify
ಕನ್ನಡ ದುನಿಯಾ       Mobile App
       

Kannada Duniya

ಕೊರಂಗು ಹತ್ಯೆಗೆ ಸಂಚು: ಇಬ್ಬರು ಅರೆಸ್ಟ್

img-20170209-wa0024

ಶಿವಮೊಗ್ಗ: ಕುಖ್ಯಾತ ರೌಡಿ ಕೊರಂಗು ಕೃಷ್ಣನ ಹತ್ಯೆಗೆ ಸಂಚು ರೂಪಿಸಿದ್ದ, ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

ಅಶ್ರಫ್(37) ಹಾಗೂ ನದೀಮ್(42) ಬಂಧಿತ ಆರೋಪಿಗಳು. ಬಂಧಿತರಿಂದ 9 ಎಂ.ಎಂ. ಪಿಸ್ತೂಲ್, 48 ಜೀವಂತ ಗುಂಡು, 1 ಮ್ಯಾಗ್ಝಿನ್, 1 ಕಾರ್ ವಶಕ್ಕೆ ಪಡೆಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಫರ್ ಖಾನ್ ಅಲಿಯಾಸ್ ಮಥಾನ್, ಇಕ್ಬಾಲ್, ಹೆಬ್ಬೆಟ್ಟು ಮಂಜ, ಅಂಬರೀಶ್, ಜಾವೀದ್ ವಿರುದ್ಧವೂ ದೂರು ದಾಖಲಾಗಿದೆ.

ವಿದೇಶದಲ್ಲಿ ಭೂಗತನಾಗಿರುವ ಪಾತಕಿ ಹೆಬ್ಬೆಟ್ಟು ಮಂಜ, ಸಹಚರರ ಮೂಲಕ ಕೊರಂಗು ಕೃಷ್ಣನ ಹತ್ಯೆಗೆ ಸಂಚು ರೂಪಿಸಿದ್ದು, ಇದಕ್ಕಾಗಿ ಬೆಂಗಳೂರಿನಿಂದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಶಿವಮೊಗ್ಗಕ್ಕೆ ಕಳುಹಿಸಿಕೊಡಲಾಗಿತ್ತು.

ಅಲ್ಲದೇ, ಒರಿಸ್ಸಾದಿಂದಲೂ ಪಿಸ್ತೂಲ್ ತರಿಸಿ ಶಿವಮೊಗ್ಗದ ಅಶ್ರಫ್ ಗೆ ತರಿಸಿಕೊಡಲಾಗಿತ್ತು. ಕೆಲವು ಪಿಸ್ತೂಲ್ ಗಳನ್ನು ಅಶ್ರಫ್ ಮಾರಾಟ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದು ಎಸ್.ಪಿ. ಅಭಿನವ್ ಖರೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...