alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಅಮಾನವೀಯ ಘಟನೆ

ಶಿವಮೊಗ್ಗ: ಅಪಘಾತದ ವೇಳೆ ಬಾನೆಟ್ ಮೇಲಿನಿಂದ ಕೆಳಗೆ ಬಿದ್ದ ವೃದ್ಧನ ಮೇಲೆಯೇ, ಕಾರು ಹರಿಸಿ ಪರಾರಿಯಾದ ಅಮಾನವೀಯ ಘಟನೆ ಶಿವಮೊಗ್ಗದ ಹೊರವಲಯದಲ್ಲಿ ನಡೆದಿದೆ.

ಹರಿಗೆ ನಿವಾಸಿ ಕೃಷ್ಣಮೂರ್ತಿ(72) ಟಿ.ವಿ.ಎಸ್. ಮೊಪೆಡ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಸಾಗುವಾಗ, ಹಿಂಬದಿಯಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೃಷ್ಣಮೂರ್ತಿ ಬಾನೆಟ್ ಮೇಲೆ ಬಿದ್ದಿದ್ದಾರೆ.

ಕಾರು ನಿಲ್ಲಿಸದ ಚಾಲಕ ಹಾಗೆಯೇ ಮುಂದೆ ಸಾಗಿದ್ದಾನೆ. ಸ್ವಲ್ಪ ದೂರದಲ್ಲೇ ಕೃಷ್ಣಮೂರ್ತಿ ಕೆಳಗೆ ಬೀಳುತ್ತಿದ್ದಂತೆ, ಅವರ ಮೇಲೆಯೇ ಕಾರು ಹರಿಸಿದ್ದಾನೆ. ಮಾತ್ರವಲ್ಲ, ಕಾರಿನ ಸಮೇತ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಕೃಷ್ಣಮೂರ್ತಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಘಟನೆಯ ದೃಶ್ಯಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ. ಶಿವಮೊಗ್ಗ ಸಂಚಾರ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತವೆಸಗಿದ ಕಾರು ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...