alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಕೆಶಿ ಬಹಿರಂಗಗೊಳಿಸ್ತಾರಾ ಹಲವು ರಾಜಕಾರಣಿಗಳ ಬಣ್ಣ…?

ಐಟಿ ಉರುಳಿಗೆ ಸಿಲುಕಿ ಬಿದ್ದಿರುವ ಸಚಿವ ಡಿ.ಕೆ. ಶಿವಕುಮಾರ್, ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುವ ವೇಳೆ, ತಮ್ಮ ಬಳಿಯೂ ಹಲವು ಡೈರಿಗಳಿವೆ. ಅದನ್ನು ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದರು.

ಡಿ.ಕೆ. ಶಿವಕುಮಾರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಒಂದು ವೇಳೆ ಶಿವಕುಮಾರ್ ಬಂಧನಕ್ಕೊಳಗಾಗುವ ಸಂದರ್ಭ ಬಂದರೆ ಕೆಲ ಪ್ರಮುಖ ರಾಜಕಾರಣಿಗಳ ಅಕ್ರಮ ವ್ಯವಹಾರವನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸದೆ ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದರು.

ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಶಿವಕುಮಾರ್, ಯಾವ ರಾಜಕಾರಣಿಗಳ ವ್ಯವಹಾರ ಯಾವ ಉದ್ಯಮಿಗಳ ಬಳಿ ಇದೆ ಎಂಬುದು ಗೊತ್ತಿದೆ. ಹೋಟೆಲ್ ಮಾಲೀಕರು ಯಾರು ಎಂಬ ವಿಚಾರಗಳನ್ನೆಲ್ಲ ಶುಭಗಳಿಗೆ ಬಂದಾಗ ಬಹಿರಂಗಗೊಳಿಸುತ್ತೇನೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...