alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆ: ಡಿಕೆಶಿ ವಿಶ್ವಾಸ

ವಿಧಾನಸಭೆ ಕಲಾಪ ಮುಗಿಸಿ ಹೊರ ಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎಲ್ಲ ಶಾಸಕರೂ ನಮ್ಮ ಜೊತೆಗಿದ್ದಾರೆಂದಿದ್ದಾರೆ. ಇಬ್ಬರು ಶಾಸಕರು ಸದನಕ್ಕೆ ಗೈರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಡಿ.ಕೆ. ಶಿವಕುಮಾರ್, ಅವ್ರೂ ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವೇ ಸಮಯದಲ್ಲಿ ಅವ್ರೂ ಕಲಾಪಕ್ಕೆ ಬರ್ತಾರೆ ಎಂದಿದ್ದಾರೆ.

ಒಬ್ಬ ಶಾಸಕರು ನಮ್ಮ ಜೊತೆ ಮಾತನಾಡಿದ್ದು ಕೆಲ ಸಮಸ್ಯೆಯಿಂದ ವಿಳಂಬವಾಗ್ತಿದೆ. ನಾವು ನಿಮ್ಮ ಜೊತೆಗಿದ್ದೇವೆ. ಆದಷ್ಟು ಬೇಗ ಬರ್ತೇನೆ ಎಂದಿದ್ದಾರಂತೆ. ಇಬ್ಬರು ಶಾಸಕರನ್ನು ನಾವು ಕರೆದುಕೊಂಡು ಬರ್ತೇವೆ ಎಂದು ಶಿವಕುಮಾರ್ ಹೇಳಿದ್ದಾರೆ. ಜೊತೆಗೆ ನಮ್ಮ ಮುಂದಿನ ನಡೆ, ತಂತ್ರವನ್ನು ಬಹಿರಂಗಪಡಿಸುವುದಿಲ್ಲ. ಕಾದು ನೋಡಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...