alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವ ಡಿಕೆಶಿಗೆ ಮಾಜಿ ಸಿಎಂ ಸಿದ್ದರಾಮಯ್ಯ ‘ಸಾಫ್ಟ್ ಪೊಲಿಟಿಕ್ಸ್’ ಪಾಠ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿಗೆ ಮುಂದಾಗಿದ್ದ ಜಾರಕಿಹೊಳಿ ಬ್ರದರ್ಸ್ ಅಸಮಾಧಾನಕ್ಕೆ ಮೂಲ ಕಾರಣರಾಗಿರುವ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ‘ಸಾಫ್ಟ್ ಪೊಲಿಟಿಕ್ಸ್’ ಪಾಠ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಸುಮಾರು ಎರಡು ಗಂಟೆಗಳಿಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಸಿದ್ದು, ಡಿಕೆಶಿಯವರಿಗೆ ಕೆಲ ರಾಜಕೀಯ ಸಲಹೆಗಳನ್ನು ನೀಡಿದ್ದಾರೆ. ಬೆಳಗಾವಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ಸರಿಯಲ್ಲ ಎಂದು ಡಿಕೆಶಿ ವಿರುದ್ಧ ಗರಂ ಆದ ಸಿದ್ದರಾಮಯ್ಯ, ರಾಜ್ಯ ನಾಯಕರೆಂದು ನಿಮ್ಮನ್ನು ನೀವು ಬಿಂಬಿಸಿಕೊಳ್ಳುತ್ತಿದ್ದೀರಾ, ಹೀಗಿರುವಾಗ ನೀವು ಕೇವಲ 2 ಕ್ಷೇತ್ರಗಳಿಗೆ ಸೀಮಿತವಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪದೇ ಪದೇ ಸಿಎಂ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತೀದ್ದೀರಾ….ಎರಡು ಕ್ಷೇತ್ರಕ್ಕೆ ಸೀಮಿತವಾದರೆ ಸಿಎಂ ಆಗಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಕೇಳಿದರೆನ್ನಲಾಗಿದೆ. ಜಾರಕಿಹೊಳಿ ಸಹೋದರರ ಬೆಳಗಾವಿ ಕ್ಷೇತ್ರಕ್ಕೆ ನೀವು ಎಂಟ್ರಿಯಾಗಿದ್ದು ಸರಿಯಲ್ಲ. ಈಗ ನಿಮ್ಮ ಕ್ಷೇತ್ರಕ್ಕೆ ಬೇರೆ ಯಾರಾದರೂ ಎಂಟ್ರಿ ಕೊಟ್ಟರೆ ನಿಮಗೆ ಬೇಸರವಾಗುವುದಿಲ್ಲವೇ…, ರಾಮನಗರ ಕ್ಷೇತ್ರಕ್ಕೆ ಹೊರಗಿನ ಬೇರೆ ಪೊಲಿಟಿಷಿಯನ್ ಬಂದ್ರೆ ನಿಮಗೆ ಹೇಗನಿಸುತ್ತೆ…? ಜಾರಕಿಹೊಳಿ ಬ್ರದರ್ಸ್ ನಿಮಗೆ ರಾಜಕೀಯ ಪ್ರತಿಸ್ಪರ್ಧಿಗಳೆ…? ಎಂದು ಕೇಳಿದ್ದಾರೆ.

ಅಲ್ಲದೇ ಚೆಸ್ ಆಡ್ತೀನಿ, ಪಾನ್ ಮೂವ್ ಮಾಡೋದು ಗೊತ್ತು ಅಂತೀರಾ… ಜಾರಕಿಹೊಳಿ ಸಹೋದರರ ಪಾನ್ ಮೂವ್ ಮಾಡಿದರೆ ಏನಾಗಬಹುದು ಎಂಬುದು ಗೊತ್ತಾಯಿತಲ್ಲವೇ…? ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರವನ್ನೇ ಉರುಳಿಸುವ ಭೀತಿಗೆ ತಂದರು… ಯಾಕೆ ಸುಮ್ಮನೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತೀರಾ….? ಇನ್ನಾದರೂ ಎಲ್ಲದಕ್ಕೂ ತೆರೆ ಎಳೆಯೋಣ. ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದು ಸಲಹೆ ನೀಡಿದ್ದಾರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...