alex Certify
ಕನ್ನಡ ದುನಿಯಾ       Mobile App
       

Kannada Duniya

ಶೀರೂರು ಶ್ರೀಗಳ ಸಾವಿಗೆ ಕಾರಣವಾಯ್ತಾ ಗೋಡಂಬಿ ಜ್ಯೂಸ್?

ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ಹಲವರ ವಿಚಾರಣೆ ನಡೆಸಿದ್ದಾರೆ.

ಶೀರೂರು ಶ್ರೀಗಳ ಮದ್ಯಪಾನ ವ್ಯಸನ, ಸ್ತ್ರೀಯರ ಸಖ್ಯ, ಭೂ ಮಾಫಿಯಾದೊಂದಿಗಿನ ನಂಟು ಇವುಗಳೆಲ್ಲವೂ ಈಗ ಬಹಿರಂಗವಾಗತೊಡಗಿದ್ದು, ಯಾವ ಕಾರಣಕ್ಕಾಗಿ ಸ್ವಾಮೀಜಿಯವರ ಸಾವು ಸಂಭವಿಸಿರಬಹುದೆಂಬುದರ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿವೆ.

ಇದರ ಮಧ್ಯೆ ಸ್ವಾಮೀಜಿಯವರು ಅನಾರೋಗ್ಯಕ್ಕೀಡಾದ ದಿನದಂದು ಗೋಡಂಬಿ ಜ್ಯೂಸ್ ಸೇವಿಸಿದ್ದರೆಂಬ ಮಾತುಗಳು ಕೇಳಿ ಬರುತ್ತಿದ್ದು, ಅವರ ಆಪ್ತ ವಲಯದಲ್ಲಿದ್ದ ಮಹಿಳೆ ಇದನ್ನು ನೀಡಿದ್ದರೆಂದು ಹೇಳಲಾಗುತ್ತಿದೆ. ಗೋಡಂಬಿ ಜ್ಯೂಸ್ ಮೂಲಕ ಸ್ವಾಮೀಜಿಯವರಿಗೆ ವಿಷಪ್ರಾಶನ ಮಾಡಿಸಿರಬಹುದೆಂಬ ವದಂತಿ ಈಗ ಹರಿದಾಡುತ್ತಿದ್ದು, ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...