alex Certify
ಕನ್ನಡ ದುನಿಯಾ       Mobile App
       

Kannada Duniya

ಶೀರೂರು ಶ್ರೀಗಳ ಸಾವಿನ ಕುರಿತ ಅನುಮಾನಕ್ಕೆ ಕೊನೆಗೂ ಬಿತ್ತು ತೆರೆ

ಶೀರೂರು ಶ್ರೀಗಳ ಸಾವಿನ ಕುರಿತಂತೆ ಎದ್ದಿದ್ದ ಅನುಮಾನಗಳು ಈಗ ಬಗೆಹರಿದಿವೆ. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಿಧಿವಿಜ್ಞಾನ ಪ್ರಯೋಗಾಲಯದ ಅಂತಿಮ ವರದಿ ಈಗ ಹೊರ ಬಿದ್ದಿದ್ದು, ಶೀರೂರು ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರು ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ಇದರಲ್ಲಿ ಉಲ್ಲೇಖಿಸಲಾಗಿದೆ.

ಶೀರೂರು ಶ್ರೀಗಳ ದೇಹದಲ್ಲಿ ಯಾವುದೇ ವಿಷ ಅಂಶ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ. ಅನ್ನನಾಳದ ರಕ್ತಸ್ರಾವ ಹಾಗೂ ಹಾಗೂ ಕೋನಿಕ್ ಲಿವರ್ ಸಿರೋಸಿಸ್ ನಿಂದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಸಾವನ್ನಪ್ಪಿರುವುದಾಗಿ ಹೇಳಲಾಗಿದೆ.

ಮರಣೋತ್ತರ ಪರೀಕ್ಷೆ ವರದಿಯಲ್ಲೂ ಶೀರೂರು ಶ್ರೀಗಳದು ಸಹಜ ಸಾವು ಎಂದು ಹೇಳಲಾಗಿದ್ದು, ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರು ಕೂಡ ಇದನ್ನೇ ಹೇಳಿರುವುದರಿಂದ ಶ್ರೀಗಳ ಸಾವಿನ ಕುರಿತು ಎದ್ದಿದ್ದ ಅನುಮಾನಗಳಿಗೆ ತೆರೆಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...