alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ವಶದಲ್ಲಿದ್ದ ಶೀರೂರು ಮಠ ಸೋದೆ ಸುಪರ್ದಿಗೆ

ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ತನಿಖೆಯ ಹಿನ್ನೆಲೆಯಲ್ಲಿ ಪೊಲೀಸರ ವಶದಲ್ಲಿದ್ದ ಉಡುಪಿ ರಥಬೀದಿಯಲ್ಲಿರುವ ಶೀರೂರು ಮಠವನ್ನು ದ್ವಂದ್ವ ಮಠವಾದ ಸೋದೆ ಮಠದ ಸುಪರ್ದಿಗೆ ನೀಡಲಾಗುತ್ತಿದೆ.

ಸ್ವಾಮೀಜಿ ಸಾವಿನ ತನಿಖೆಗಾಗಿ ಉಡುಪಿಯಲ್ಲಿರುವ ಶೀರೂರು ಮಠ ಹಾಗೂ ಹಿರಿಯಡ್ಕದಲ್ಲಿರುವ ಮೂಲ ಮಠವನ್ನು ಸುಪರ್ದಿಗೆ ಪಡೆದುಕೊಂಡ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಇದರಿಂದ ಮಠದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಪೊಲೀಸರ ವಶದಲ್ಲಿದ್ದ ಉಡುಪಿಯ ಶೀರೂರು ಮಠವನ್ನು ಸೋದೆ ಮಠಕ್ಕೆ ಬಿಟ್ಟು ಕೊಡಲಾಗುತ್ತಿದೆ. ಅದೇ ರೀತಿ ಸದ್ಯವೇ ಪೊಲೀಸ್ ಇಲಾಖೆ, ಮೂಲ ಶೀರೂರು ಮಠವನ್ನೂ ಕೂಡ ಸೋದೆ ಮಠಕ್ಕೆ ಬಿಟ್ಟು ಕೊಡಲಿದೆ ಎಂದು ಸೋದೆ ಮಠದ ದಿವಾನ ಪಿ. ಶ್ರೀನಿವಾಸ ತಂತ್ರಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...