alex Certify
ಕನ್ನಡ ದುನಿಯಾ       Mobile App
       

Kannada Duniya

ಶೀರೂರು ಶ್ರೀಗಳ ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ಏನಿದೆ…?

ಉಡುಪಿ: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳ ನಿಗೂಢ ಸಾವಿನ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಈಗ ಪೊಲೀಸರಿಗೆ ಲಭ್ಯವಾಗಿದೆ. ಎಂಟು ಪುಟಗಳ ಪೋಸ್ಟ್ ಮಾರ್ಟಮ್ ವರದಿಯನ್ನು ಕೆಎಂಸಿಯ ವೈದ್ಯರು ಪೊಲೀಸರಿಗೆ ನೀಡಿದ್ದಾರೆ. ಆದರೆ ಶ್ರೀಗಳ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಪೋಸ್ಟ್ ಮಾರ್ಟಮ್ ವರದಿ ಲಭ್ಯವಾದರೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಎಫ್.ಎಸ್.ಎಲ್. ವರದಿ ಬಂದ ಬಳಿಕ ಎರಡು ವರದಿಗಳನ್ನು ತಾಳೆ ಮಾಡಿ ನೋಡಲಾಗುತ್ತದೆ. ನಂತರ ಸಾವಿಗೆ ಕಾರಣವಾದ ಅಂಶಗಳೇನೆಂಬುದನ್ನು ಬಹಿರಂಗ ಪಡಿಸಲಾಗುತ್ತದೆ.

ಸಧ್ಯ ಲಭ್ಯವಿರುವ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಶರೀರದಲ್ಲಿ ಎಲ್ಲೆಲ್ಲಿ ರಕ್ತಸ್ರಾವವಾಗಿತ್ತು, ಅಲ್ಲಿಯವರೆಗೆ ಆರೋಗ್ಯ ಸ್ಥಿತಿ ಹೇಗಿತ್ತು ಎಂಬ ವಿವರಗಳಿವೆ ಎನ್ನಲಾಗಿದೆ. ಕೆಎಂಸಿ ವೈದ್ಯರು ಮತ್ತು ಪೊಲೀಸರಿಗೆ ಸಾವಿಗೆ ಕಾರಣವಾದ ಅಂಶ ಏನು ಎಂದು ಗೊತ್ತಾಗಿದೆ. ಆದರೆ ಎಫ್.ಎಸ್.ಎಲ್. ವರದಿ ಬರುವವರೆಗೆ ಬಹಿರಂಗಪಡಿಸುವಂತಿಲ್ಲ. ಹಾಗಾಗಿ ಶ್ರೀಗಳ ಸಾವಿಗೆ ಕಾರಣವೇನೆಂದು ತಿಳಿಯಲು ಎಫ್.ಎಸ್.ಎಲ್. ವರದಿ ಬರುವವರೆಗೂ ಕಾಯಲೇಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...