alex Certify
ಕನ್ನಡ ದುನಿಯಾ       Mobile App
       

Kannada Duniya

ಶೀರೂರು ಮೂಲ ಮಠವನ್ನೂ ಸೋದೆ ಸುಪರ್ದಿಗೆ ಒಪ್ಪಿಸಿದ ಪೊಲೀಸರು

ಉಡುಪಿ: ಶೀರೂರು ಶ್ರೀ ಲಕ್ಷೀವರ ತೀರ್ಥರ ಸಾವಿನ ಬಳಿಕ ತನಿಖೆ ಹಿನ್ನಲೆಯಲ್ಲಿ ಪೊಲೀಸ್ ವಶದಲ್ಲಿದ್ದ ಹಿಡಿಯಡಕದಲ್ಲಿರುವ ಶೀರೂರು ಮೂಲಮಠವನ್ನು ಸೋದೆ ಮಠದ ಸುಪರ್ದಿಗೆ ಒಪ್ಪಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮೂಲಮಠವನ್ನು ಬಿಟ್ಟುಕೊಡಲಾಗಿದ್ದು, ಸ್ವಾಮೀಜಿ ಅವರು ತಂಗುತ್ತಿದ್ದ ಖಾಸಗಿ ಕೋಣೆ, ಸ್ಟೋರ್ ರೂಂ, ಅಡುಗೆ ಕೋಣೆ, ಮಠದ ಕಚೇರಿ ಸೇರಿದಂತೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ 5 ರೂಂಗಳ ಕೀಲಿಕೈಯನ್ನು ಸೋದೆ ಮಠದ ಉಸ್ತುವಾರಿ ಸುಬ್ರಹ್ಮಣ್ಯ ಭಟ್ ಅವರಿಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಪೊಲೀಸರು, ರಥಬೀದಿಯಲ್ಲಿರುವ ಶೀರೂರು ಮಠವನ್ನು ಹಾಗೂ ಮಠದ ಚರಾಸ್ತಿಯನ್ನು ಸೋದೆ ಮಠಕ್ಕೆ ಒಪ್ಪಿಸಿದ್ದರು. ಈಗ ಶೀರೂರು ಮೂಲಮಠವನ್ನೂ ಒಪ್ಪಿಸಿರುವುದರಿಂದ ಮಠದಲ್ಲಿ ಹಿಂದಿನಂತೆಯೇ ಪೂಜೆಗಳು ನಡೆಯಲಿವೆ. ಭಕ್ತರ ಪ್ರವೇಶಕ್ಕೆ ಮಠವು ಮುಕ್ತವಾಗಿದೆ. ಅಲ್ಲದೇ ಶೀಘ್ರವೇ ಶೀರೂರು ಶ್ರೀಗಳ ಆರಾಧನೋತ್ಸವ ಕೂಡ ನಡೆಯಲಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...