alex Certify
ಕನ್ನಡ ದುನಿಯಾ       Mobile App
       

Kannada Duniya

800 ಗ್ರಾಂ ತೂಕದ ನವಜಾತ ಶಿಶುವಿಗೀಗ ಮರು ಜನ್ಮ

ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 26 ವಾರಗಳ 800 ಗ್ರಾಂ ತೂಕದ ಅವಧಿ ಪೂರ್ವ ಶಿಶು ಜನನವಾಗಿದ್ದು, ಆರೈಕೆ ಬಳಿಕ ಇದೀಗ ಮಗು ಆರೋಗ್ಯದಿಂದಿದೆ ಎಂದು ಆಸ್ಪತ್ರೆಯ ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ. ಸುನಿಲ್ ಕುಮಾರ್ ಗಂಜಮಾದ ತಿಳಿಸಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡೂರು ತಾಲ್ಲೂಕಿನ ಗ್ರಾಮವೊಂದರ ದಂಪತಿ ಮದುವೆಯಾಗಿ 8 ವರ್ಷ ಕಳೆದಿದ್ದರೂ ಮಕ್ಕಳಾಗಿರಲಿಲ್ಲ. ನಂತರ ಗರ್ಭಧಾರಣೆಯಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗೃಹಿಣಿ ಅವಳಿ ಶಿಶುಗಳಿಗೆ ಗರ್ಭ ಧರಿಸಿದ್ದರು. ಆದರೆ ಅವಳಿ ಮಕ್ಕಳ ಪೈಕಿ ಒಂದು ಶಿಶು 26 ವಾರಗಳ ತರುವಾಯ ಗರ್ಭದಲ್ಲಿಯೇ ಮೃತಪಟ್ಟಿತ್ತು. ನಂತರ ತಾಯಿಯನ್ನು ಹೆಚ್ಚುವರಿ ಚಿಕಿತ್ಸೆಗೆಂದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆತರಲಾಗಿತ್ತು ಎಂದರು.

ಆಸ್ಪತ್ರೆಗೆ ಕರೆತಂದಾಗ ತಾಯಿ ಮತ್ತು ಶಿಶು ಇಬ್ಬರಿಗೂ ಅಪಾಯದ ಸ್ಥಿತಿ ಇತ್ತು. ಪ್ರಸವವನ್ನು ವಿಳಂಬವಾಗಿಸಲು ಪ್ರಸೂತಿ ತಜ್ಞರು ಪ್ರಯತ್ನಿಸಿದರಾದರೂ 4ನೇ ದಿನದಲ್ಲಿ ತಾಯಿಗೆ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತಾಯಿ ಮತ್ತು ಶಿಶುವಿನ ಉಳಿವಿಗೆ ಸಿಸೇರಿಯನ್ ಶಸ್ತ್ರ ಚಿಕಿತ್ಸೆ ನಡೆಸಬೇಕಾಯಿತು ಎಂದು ತಿಳಿಸಿದರು.

ಕೇವಲ 26 ವಾರಗಳ ಶಿಶು ಕೇವಲ 800 ಗ್ರಾಂ ತೂಕವಿತ್ತು. 1 ಕೆಜಿಗಿಂತ ಕಡಿಮೆ ತೂಕದ ಶಿಶುವಿನ ಆರೈಕೆ ಸವಾಲಿನ ಕೆಲಸವಾಗಿದ್ದು, ಇದಕ್ಕೆ ಪರಿಣತಿ ಹೊಂದಿದ ವೈದ್ಯರು, ನಿಯೋನಾಟಾಲ್ ಐಸಿಯು ಸೌಲಭ್ಯ ಹಾಗೂ ವಿಶೇಷ ತರಬೇತಿ ಪಡೆದ ದಾದಿಯರಿಂದ ಸೂಕ್ಷ್ಮವಾಗಿ ಆರೈಕೆ ಮಾಡಲಾಯಿತು. ಆಸ್ಪತ್ರೆಯಲ್ಲಿ 45 ದಿನಗಳ ಆರೈಕೆ ಬಳಿಕ ಮಗು ಸ್ವತಂತ್ರವಾಗಿ ಉಸಿರಾಡುತ್ತಿದ್ದು, ಶಿಶುವಿನ ಅಂಗಾಂಗ ವ್ಯವಸ್ಥೆ ಬಾಹ್ಯ ಪರಿಸರದ ಜೊತೆಗೆ ಹೊಂದಿಕೊಳ್ಳಲು ಕೃತಕ ಪರಿಸರ ರೂಪಿಸಿ ಕಾಪಾಡಲಾಯಿತು. ಇದೀಗ ಶಿಶು 1.650 ಕೆಜಿ ತೂಕವಿದ್ದು ಆರೋಗ್ಯವಾಗಿದೆ. ದಂಪತಿಗಳು ಸಂತೋಷದಿಂದಿದ್ದಾರೆ. ಸೇವೆಗೆ ಸಾರ್ಥಕತೆ ದೊರಕಿದೆ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...