alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಶಿವಮೊಗ್ಗ: ಮಹಾನಗರಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ.

ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮರಳಿ ಅಧಿಕಾರಕ್ಕೆ ಏರುವ ಸಾಧ್ಯತೆ ನಿಚ್ಚಳವಾಗಿದೆ. ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ತೆನೆಹೊತ್ತ ಮಹಿಳೆ (ಜೆಡಿಎಸ್) ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಐವರು ಪಕ್ಷೇತರರು ಹಾಗೂ ಎಸ್ಡಿಪಿಐನ ಒಬ್ಬರು ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ.

ಇಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭಗೊಂಡಿತು. 11 ಗಂಟೆ ಸುಮಾರಿಗೆ 35 ವಾರ್ಡ್ ಗಳ ಫಲಿತಾಂಶ ಹೊರಬಿದ್ದಿತ್ತು. ಗೆದ್ದ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಸಂತೋಷದಿಂದ ಹಿಂತಿರುಗಿದರೆ, ಸೋತ ಅಭ್ಯರ್ಥಿಗಳು ನಿರಾಶೆಯಿಂದ ಹಿಂತಿರುಗಿದರು.

ಪಾಲಿಕೆಯ ಕೆಲವು ವಾರ್ಡ್ ನ ಎಣಿಕೆ ಕಾರ್ಯ ತೀವ್ರ ಕುತೂಹಲ ಮೂಡಿಸಿತ್ತು. ವಾರ್ಡ್ 15ರ ಹರಿಗೆಯ ಫಲಿತಾಂಶ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಇಬ್ಬರು ಅಭ್ಯರ್ಥಿಗಳು 1708 ಮತಗಳನ್ನು ಸಮವಾಗಿ ಪಡೆದಿದ್ದರು. ಅಭ್ಯರ್ಥಿಗಳ ಮನವಿ ಮೇರೆಗೆ ಮರು ಎಣಿಕೆ ನಡೆಸಲಾಯಿತು. ಆದರೆ ಆಗಲೂ ಸಮ ಮತ ಬಂದ ಹಿನ್ನೆಲೆಯಲ್ಲಿ ಲಾಟರಿ ಎತ್ತುವ ಮೂಲಕ ಫಲಿತಾಂಶ ಪ್ರಕಟಿಸಲು ಚುನಾವಣಾ ಅಧಿಕಾರಿಗಳು ನಿರ್ಧರಿಸಿದರು. ಲಾಟರಿಯಲ್ಲಿ ಅದೃಷ್ಟಲಕ್ಷ್ಮಿ ಜೆಡಿಎಸ್ ಅಭ್ಯರ್ಥಿ ಸತ್ಯನಾರಾಯಣ್ ರಾಜ್ ಗೆ ಒಲಿಯಿತು. ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಗರಸಭೆ ಮಾಜಿ ಸದಸ್ಯ ಎಸ್.ರಾಜಶೇಖರ್ ಸೋಲನುಭವಿಸಿದರು.

ಗೆದ್ದ ಪ್ರಮುಖರು:

ನಗರಸಭೆ ಮಾಜಿ ಅಧ್ಯಕ್ಷರಾದ ಎಸ್.ಎಸ್. ಚನ್ನಬಸಪ್ಪ, ಬಿ.ಎ.ರಮೇಶ್ ಹೆಗ್ಡೆ, ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಹೆಚ್.ಸಿ.ಯೋಗೀಶ್ ಗೆದ್ದ ಪ್ರಮುಖರಾಗಿದ್ದಾರೆ.

ಸೋತ ಪ್ರಮುಖರು:

ಸೋಲಿಲ್ಲದ ಸರದಾರನೆಂದೇ ಬಿಂಬಿತರಾಗಿದ್ದ ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಸೀಗೆಹಟ್ಟಿ ವಾರ್ಡ್ ನಲ್ಲಿ ಸೋಲನುಭವಿಸಿದರು. ಬಜರಂಗದಳ ಪ್ರಮುಖ ದೀನದಯಾಳು ಮಲ್ಲೇಶ್ವರ ನಗರದಲ್ಲಿ ಸೋಲು ಕಂಡರು.

ಬಂಡಾಯ ಅಭ್ಯರ್ಥಿಗಳಿಗೆ ಗೆಲುವು:

ಬಿಜೆಪಿಯಿಂದ ಟಿಕೆಟ್ ಸಿಗದೇ ಅತೃಪ್ತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಧೀರರಾಜ್ ಹೊನ್ನವಿಲೆ, ರಾಹುಲ್ ಬಿದರೆ, ಎನ್.ಎಸ್.ಮಂಜುನಾಥ್, ಕೇಬಲ್ ನಾಗರಾಜ್ ಹಾಗೂ ಕಾಂಗ್ರೆಸ್ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದ ರೇಖಾ ರಂಗನಾಥ್ ಗೆಲುವು ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...